ಸಾಲ ಮಾಡುವುದರಲ್ಲೂ ದಾಖಲೆ ಬರೆದ ಇಮ್ರಾನ್ ಖಾನ್: ಮೊದಲ ವರ್ಷವೇ 7500 ಬಿಲಿಯನ್ ಸಾಲ!

ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ನೆರೆರಾಷ್ಟ್ರ ಪಾಕಿಸ್ತಾನ ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ಇಮ್ರಾನ್ ಖಾನ್ ಸರ್ಕಾರ ಸಾಲ ಮಾಡುವುದರಲ್ಲೂ ದಾಖಲೆ ಮಾಡಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ನೆರೆರಾಷ್ಟ್ರ ಪಾಕಿಸ್ತಾನ ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ಇಮ್ರಾನ್ ಖಾನ್ ಸರ್ಕಾರ ಸಾಲ ಮಾಡುವುದರಲ್ಲೂ ದಾಖಲೆ ಮಾಡಿದೆ.

ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಇದರಿಂದ ಹೊರ ಬರುವ ಸಲುವಾಗಿ ಆರ್ಥಿಕ ನೆರವು ನೀಡುವಂತೆ ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಮುಂದೆ ಕೈ ಚಾಚಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ಸದ್ಯದ ಆರ್ಥಿಕ ದುಃಸ್ಥಿತಿಯನ್ನು ಸರಿದೂಗಿಸಲು ಸರ್ಕಾರಕ್ಕೆ ಸೇರಿದ ಐಷಾರಾಮಿ ಕಾರುಗಳನ್ನು ಹರಾಜು ಮಾಡಿತ್ತು. ಇದರ ಮಧ್ಯೆ, ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯೊಳಗೆ ದಾಖಲೆ ಮೊತ್ತದ ಸಾಲ ಎತ್ತಿದೆ ಎಂಬ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಬಹಿರಂಗಪಡಿಸಿದೆ. 

ಇಮ್ರಾನ್ ಖಾನ್ ಸರ್ಕಾರ 2018 ರ ಆಗಸ್ಟ್ ನಿಂದ 2019ರ ಆಗಸ್ಟ್ ವರೆಗೆ 7,509 ಬಿಲಿಯನ್ ಪಾಕಿಸ್ತಾನದ ರೂಪಾಯಿ ಸಾಲ ಮಾಡಿದೆ ಎನ್ನಲಾಗಿದ್ದು, ಈ ಪೈಕಿ ವಿದೇಶಗಳಿಂದ ಪಡೆದ ಸಾಲ 2,804 ಬಿಲಿಯನ್ ಗಳಾಗಿದ್ದರೆ, ಸ್ಥಳೀಯ ಮೂಲಗಳಿಂದ 4,705 ಬಿಲಿಯನ್ ಸಾಲ ಪಡೆದಿದೆ ಎಂದು ವರದಿ ಮಾಡಲಾಗಿದೆ.

ಸ್ಟೇಟ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಪಾಕಿಸ್ತಾನದ ಸಾರ್ವಜನಿಕ ಸಾಲದಲ್ಲಿ ಶೇ 1.43 ರಷ್ಟು ಏರಿಕೆ ಕಂಡುಬಂದಿದೆ. ಕಳೆದ ವರ್ಷ ಆಗಸ್ಟ್ನಲ್ಲಿ 24,732 ಬಿಲಿಯನ್ ರೂ. ಇದ್ದ ಸಾಲ 32,240 ಬಿಲಿಯನ್ ರೂಗಳಿಗೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com