ಕ್ಸಿ-ಮೋದಿ ಮಾತುಕತೆ ಫಲಪ್ರದ: ಚೀನಾ ಸಚಿವ

ಚೀನಾದ ಅಧ್ಯಕ್ಷ ಕ್ಸಿ ಜಿನ್;ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಅನೌಪಚಾರಿಕ ಶೃಂಗಸಭೆ ಫಲಪ್ರದ ಫಲಿತಾಂಶವನ್ನು ಸಾಧಿಸಿದೆ ಎಂದು ಚೀನಾದ ಉಪ-ವಿದೇಶಾಂಗ ಸಚಿವ ಲುವೋ ಝಹೋಯಿ ಹೇಳಿದ್ದಾರೆ.

Published: 13th October 2019 06:35 PM  |   Last Updated: 13th October 2019 06:41 PM   |  A+A-


Bilateral Talks between Modi- Xi Jinping is productive says China Minister

ಕ್ಸಿ-ಮೋದಿ ಮಾತುಕತೆ ಫಲಪ್ರದ: ಚೀನಾ ಸಚಿವ

Posted By : Srinivas Rao BV
Source : UNI

ನವದೆಹಲಿ: ಚೀನಾದ ಅಧ್ಯಕ್ಷ ಕ್ಸಿ ಜಿನ್;ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಅನೌಪಚಾರಿಕ ಶೃಂಗಸಭೆ ಫಲಪ್ರದ ಫಲಿತಾಂಶವನ್ನು ಸಾಧಿಸಿದೆ ಎಂದು ಚೀನಾದ ಉಪ-ವಿದೇಶಾಂಗ ಸಚಿವ ಲುವೋ ಝಹೋಯಿ ಹೇಳಿದ್ದಾರೆ.

ದೀರ್ಘ ಸಂಪ್ರದಾಯಗಳನ್ನು ಹೊಂದಿರುವ ಚೀನಾ ಮತ್ತು ಭಾರತ ಎರಡೂ ಪರಸ್ಪರ ಸಹಕಾರ ಹೆಚ್ಚಿಸಲು ಮತ್ತು ವಿವಿಧ ಸಂಸ್ಕೃತಿಗಳು ಮತ್ತು ನಾಗರಿಕತೆಗಳ ವಿನಿಮಯಕ್ಕೆ ಜಂಟಿಯಾಗಿ ಉತ್ತೇಜಿಸಬೇಕು ಎಂದು ಉಭಯ ನಾಯಕರು ಒಪ್ಪಿಕೊಂಡರು ಎಂದು ಅವರು  ತಿಳಿಸಿದರು.

ದಕ್ಷಿಣ ಭಾರತದ ಮಹಾಬಲಿಪುರಂನಲ್ಲಿ ನಡೆದ ಎರಡು ದಿನಗಳ ಅನೌಪಚಾರಿಕ ಸಭೆಯಲ್ಲಿ, ಮೋದಿ ಮತ್ತು ಅಧ್ಯಕ್ಷ ಕ್ಸಿ ಅವರು ಜಾಗತಿಕ ಮತ್ತು ಪ್ರಾದೇಶಿಕ ಪ್ರಾಮುಖ್ಯತೆಯ ದೀರ್ಘಕಾಲೀನ ಮತ್ತು ಕಾರ್ಯತಂತ್ರದ ವಿಷಯಗಳ ಬಗ್ಗೆ ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಉಭಯ ದೇಶಗಳ ಅಭಿವೃದ್ಧಿಯ ಸಹಭಾಗಿತ್ವವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ಲುವೋ ಹೇಳಿದರು.

ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಯ ಬಗ್ಗೆ ಹೆಚ್ಚು ಮಾತನಾಡಿದರು, ರಾಜ್ಯ ಆಡಳಿತದ ಅನುಭವದಲ್ಲಿ ಸಂವಹನವನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿ ಕಾರ್ಯತಂತ್ರಗಳ ಬಲಪಡಿಸಲು ಒಪ್ಪಿಕೊಂಡರು, ಮತ್ತು ದ್ವಿಪಕ್ಷೀಯ ವಿನಿಮಯವನ್ನು ಹೇಗೆ ಗಾಢವಾಗಿಸಬೇಕು ಎಂಬುದರ ಕುರಿತು ಚರ್ಚಿಸಿದರು ಎಂದು ಅವರು ತಿಳಿಸಿದರು.

ಉಭಯ ದೇಶಗಳು ಭಯೋತ್ಪಾದನೆಯನ್ನು ಎಲ್ಲಾ ರೀತಿಯಲ್ಲೂ ಎದುರಿಸಲು ಬದ್ಧವಾಗಿವೆ ಎಂದು ಉಭಯ ನಾಯಕರು ಹೇಳಿದ್ದಾರೆ ಮತ್ತು ಭಯೋತ್ಪಾದನೆ ನಿಗ್ರಹದ ಸಹಕಾರವನ್ನು ಬಲಪಡಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ ಎಂದು ಲುವೋ ಹೇಳಿದರು.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp