ವಿಶ್ವದ ಆರ್ಥಿಕ ಬೆಳವಣಿಗೆ ದಶಕದಲ್ಲಿಯೇ ಕಡಿಮೆ ಶೇ.3ಕ್ಕೆ ಕುಸಿಯಲಿದೆ: ಐಎಂಎಫ್

ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ 2019ರ ಜಾಗತಿಕ  ಆರ್ಥಿಕ ಬೆಳವಣಿಗೆಯ ಮುನ್ನೋಟದಲ್ಲಿ ಅತಿದೊಡ್ಡ ಆರ್ಥಿಕತೆಗಳಾದ್ಯಂತ ವ್ಯಾಪಕ ಕುಸಿತವನ್ನು ಉಲ್ಲೇಖಿಸಿದೆ. 
ಐಎಂಎಫ್
ಐಎಂಎಫ್

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ 2019ರ ಜಾಗತಿಕ  ಆರ್ಥಿಕ ಬೆಳವಣಿಗೆಯ ಮುನ್ನೋಟದಲ್ಲಿ ಅತಿದೊಡ್ಡ ಆರ್ಥಿಕತೆಗಳಾದ್ಯಂತ ವ್ಯಾಪಕ ಕುಸಿತವನ್ನು ಉಲ್ಲೇಖಿಸಿದೆ. 

ಜುಲೈನಲ್ಲಿ ಶೇ. 3.2 ರಷ್ಟು ಕುಸಿತಗೊಂಡಿದ್ದ ವಿಶ್ವದ ಆರ್ಥಿಕತೆ ಈ ವರ್ಷ ಶೇಕಡ 3 ರಷ್ಟು ಆಗಲಿದೆ. 2020ರಲ್ಲಿ ಶೇ. 3.4ರಿಂದ 3. 5 ರಷ್ಟು ಕುಸಿತವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ. 

2009ಕ್ಕಿಂತಲೂ ಈ ವರ್ಷದ ಆರ್ಥಿಕ ಬೆಳವಣಿಗೆ ದುರ್ಬಲವಾಗಲಿದೆ. ಏಕೆಂದರೆ ಅಮೆರಿಕಾ, ಯುರೋಪ್, ಚೀನಾ ಮತ್ತು ಭಾರತದ ಆರ್ಥಿಕತೆಯೂ ಹದಗೆಟ್ಟಿದೆ ಎಂದು ಐಎಂಎಫ್ ತಿಳಿಸಿದೆ.

ಮಂದಗತಿ ಮತ್ತು ಅನಿಶ್ಚಿತ ಚೇತರಿಕೆಯೊಂದಿಗೆ ಜಾಗತಿಕ ದೃಷ್ಟಿಕೋನವು ಅನಿಶ್ಚಿತವಾಗಿ ಉಳಿದಿದೆ" ಎಂದು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾದ  ಗೀತಾ ಗೋಪಿನಾಥ್ ವರದಿಯಲ್ಲಿ ಬರೆದಿದ್ದಾರೆ 

ಈ ವಾರ ವಾಷಿಂಗ್ಟನ್ ನಲ್ಲಿ ನಡೆಯಲಿರುವ ಐಎಂಎಫ್ ಹಾಗೂ ವಿಶ್ವ ಬ್ಯಾಂಕ್ ವಾರ್ಷಿಕ ಸಭೆಗಳ ಸ್ವಲ್ಪ ಮುಂಚಿತವಾಗಿ  ವಿಶ್ವ ಆರ್ಥಿಕತೆಯ ವಾಸ್ತವ ಸ್ಥಿತಿ ಬೆಳಕಿಗೆ ಬಂದಿದ್ದು, ಹೆಚ್ಚಿನ ಸುಂಕಗಳ ಆರ್ಥಿಕ ವೆಚ್ಚವನ್ನು ಪ್ರತಿಬಿಂಬಿಸುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿ ಜಾಗತಿಕ ಬೆದರಿಕೆಗಳಲ್ಲಿ ಒಂದಾಗಿದ್ದು, ವಿಶ್ವದಾದ್ಯಂತ  ಅಧಿಕಾರಿಗಳು ಸಭೆಯಲ್ಲಿ ನಿರತರಾಗಿದ್ದಾರೆ. 

ಕಳೆದ ವಾರ ಅಮೆರಿಕಾ- ಚೀನಾ ನಡುವಿನ ಮಾತುಕತೆಯಿಂದ ಜಾಗತಿಕ ಅನಿಶ್ಚಿತತೆ ಸರಾಗವಾಗಲಿದೆಯೇ ಎಂಬ ಬಗ್ಗೆ ಸ್ಪಷ್ಟತೆಗಾಗಿ ಹೂಡಿಕೆದಾರರು ಕಾಯುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com