ಭಾರತ-ಅಮೆರಿಕಾ ದ್ವಿಪಕ್ಷೀಯ ರಕ್ಷಣಾ ವ್ಯಾಪಾರ ಈ ವರ್ಷ 18 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ: ಪೆಂಟಗಾನ್ 

ಮುಂದಿನ ವಾರ ದೆಹಲಿಯಲ್ಲಿ 9ನೇ ಭಾರತ-ಅಮೆರಿಕಾ ರಕ್ಷಣಾ ತಂತ್ರಜ್ಞಾನಗಳು ಮತ್ತು ವ್ಯಾಪಾರ ಉಪಕ್ರಮ(ಡಿಟಿಟಿಐ)ದ ಸಮೂಹ ಸಭೆ ನಡೆಯಲಿದೆ. 
ಭಾರತ ಮತ್ತು ಅಮೆರಿಕಾ ಧ್ವಜಗಳು
ಭಾರತ ಮತ್ತು ಅಮೆರಿಕಾ ಧ್ವಜಗಳು

ವಾಷಿಂಗ್ಟನ್: ಮುಂದಿನ ವಾರ ದೆಹಲಿಯಲ್ಲಿ 9ನೇ ಭಾರತ-ಅಮೆರಿಕಾ ರಕ್ಷಣಾ ತಂತ್ರಜ್ಞಾನಗಳು ಮತ್ತು ವ್ಯಾಪಾರ ಉಪಕ್ರಮ(ಡಿಟಿಟಿಐ)ದ ಸಮೂಹ ಸಭೆ ನಡೆಯಲಿದೆ. ಇದಕ್ಕೂ ಮುನ್ನ ಹೇಳಿಕೆ ನೀಡಿರುವ ಅಮೆರಿಕಾ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಪೆಂಟಗಾನ್, ಈ ವರ್ಷದ ಕೊನೆಯ ವೇಳೆಗೆ ಎರಡೂ ದೇಶಗಳ ದ್ವಿಪಕ್ಷೀಯ ರಕ್ಷಣಾ ವ್ಯಾಪಾರ 18 ಶತಕೋಟಿ ಡಾಲರ್ ಗೆ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ.


ಅಮೆರಿಕಾದ ಸ್ವಾಧೀನ ಮತ್ತು ಸುಸ್ಥಿರತೆಗಾಗಿ ರಕ್ಷಣಾ ಇಲಾಖೆ ಉಪ ಕಾರ್ಯದರ್ಶಿ ಎಲ್ಲೆನ್ ಎಂ ಲಾರ್ಡ್ ಮಾತನಾಡಿ, ಭಾರತದೊಂದಿಗೆ ಮಿಲಿಟರಿ ಸಂಬಂಧ ಮತ್ತು ಸಹಕಾರವನ್ನು ವಿಸ್ತರಿಸಿ ಸಹಭಾಗಿತ್ವವನ್ನು ಬಲಪಡಿಸಲು ಅಮೆರಿಕಾ ಬದ್ಧವಾಗಿದೆ ಎಂದಿದ್ದಾರೆ.


2008ರ ಹೊತ್ತಿನಲ್ಲಿ ಶೂನ್ಯವಾಗಿದ್ದ ದ್ವಿಪಕ್ಷೀಯ ರಕ್ಷಣಾ ವ್ಯಾಪಾರ ಇಂದು 18 ಶತಕೋಟಿ ಡಾಲರ್ ಗೆ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ. ಅವರು ಮುಂದಿನ ವಾರ ದೆಹಲಿಯಲ್ಲಿ ಡಿಟಿಟಿಐ ಸಭೆಯಲ್ಲಿ ಭಾರತದ ರಕ್ಷಣಾ ಇಲಾಖೆ ಕಾರ್ಯದರ್ಶಿ ಅಪೂರ್ವ ಚಂದ್ರ ಅವರ ಜೊತೆ ಭಾಗಿಯಾಗಲಿದ್ದಾರೆ.


ಇಂಡಿಯಾ ಸ್ಟ್ರಾಟೆಜಿಕ್ ಟ್ರೇಡ್ ಅಥಾರಿಟಿ ಶ್ರೇಣಿ 1 ಹುದ್ದೆಯನ್ನು ಅಮೆರಿಕಾ ಕಳೆದ ವರ್ಷ ಆಗಸ್ಟ್ ನಲ್ಲಿ ನೀಡಿತ್ತು. ಇದರಿಂದಾಗಿ, ಸುವ್ಯವಸ್ಥಿತ ಪ್ರಕ್ರಿಯೆಯಡಿ ಅಮೆರಿಕಾದ ಕಂಪೆನಿಗಳು ಅತ್ಯುನ್ನತ ದರ್ಜೆಯ, ಅತ್ಯುನ್ನತ ತಂತ್ರಜ್ಞಾನವನ್ನೊಳಗೊಂಡ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡಬಹುದಾಗಿದೆ. ಅಲ್ಲದೆ ಅಮೆರಿಕಾ ಜೊತೆ ನ್ಯಾಟೊ ಸದಸ್ಯ ರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ರಕ್ಷಣಾ ವ್ಯಾಪಾರದಲ್ಲಿ ಹೊಂದಿರುವ ಅಧಿಕಾರದಂತೆಯೇ ಭಾರತ ಕೂಡ ವಸ್ತುಗಳ ಆಮದಿನ ವಿಚಾರದಲ್ಲಿ ಸಮಾನ ಅಧಿಕಾರ ಹೊಂದುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com