ಬೌದ್ಧ ದೇವಾಲಯ ಅಪವಿತ್ರಗೊಳಿಸಿದ ಆರೋಪ: ಭೂತಾನ್ ನಲ್ಲಿ ಭಾರತೀಯ ಪ್ರವಾಸಿ ಬಂಧನ 

ಭೂತಾನ್ ನಲ್ಲಿ ಬೌದ್ಧ ದೇವಾಲಯವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಭಾರತೀಯ ಪ್ರವಾಸಿಗನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬೌದ್ಧ ದೇವಾಲಯ ಮೇಲೆ ನಿಂತಿರುವ ಅಭಿಜಿತ್ ಹಜಾರೆ
ಬೌದ್ಧ ದೇವಾಲಯ ಮೇಲೆ ನಿಂತಿರುವ ಅಭಿಜಿತ್ ಹಜಾರೆ

ಥಿಂಪು: ಭೂತಾನ್ ನಲ್ಲಿ ಬೌದ್ಧ ದೇವಾಲಯವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಭಾರತೀಯ ಪ್ರವಾಸಿಗನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.


ಭೂತಾನ್ ಪ್ರಜೆ ನೇತೃತ್ವದಲ್ಲಿ ಮಹಾರಾಷ್ಟ್ರ ಮೂಲದ ಅಭಿಜಿತ್ ರತನ್ ಹಜಾರೆ ಮತ್ತು ಇತರ 13 ಮಂದಿ ಪ್ರವಾಸಿಗರು ಬೈಕ್ ನಲ್ಲಿ ಭೂತಾನ್ ಗೆ ಹೋಗಿದ್ದರು. ಹೀಗೆ ಹೋಗಿದ್ದವರು ಬೌದ್ಧ ದೇವಸ್ಥಾನವೊಂದರ ಬಳಿ ಕಳೆದ ಗುರುವಾರ ವಿಶ್ರಾಂತಿ ಪಡೆದುಕೊಳ್ಳಲು ಬೈಕ್ ನಲ್ಲಿ ಇಳಿದುಕೊಂಡರು. ಬೈಕ್ ನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಲೆಂದು ಇತರರು ಪ್ರಯತ್ನಿಸುತ್ತಿರುವಾಗ ಹಜಾರೆ ಏಣಿಯ ನೆರವು ಪಡೆದುಕೊಂಡು ದೇವಸ್ಥಾನದ ಮೇಲೆ ಹತ್ತಿದ್ದಾರೆ. ಆಗ ಅವರ ಗುಂಪಿನ ಕೆಲವರು ಸಹ ಇದ್ದರು. ಇದೆಲ್ಲಾ ಭೂತಾನ್ ನ ಪ್ರಜೆಗೆ ಗೊತ್ತಾಗಿರಲಿಲ್ಲ.


ಮತ್ತೊಬ್ಬ ಭೂತಾನ್ ಪ್ರಜೆ ಜಾಂಬೆ ಎಂಬುವವರು ದೇವಾಲಯವನ್ನು ದುರಸ್ತಿ ಮಾಡುವವರು ಸಹ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಘಟನೆ ಪೊಲೀಸರಿಗೆ ಗೊತ್ತಾದ ಕೂಡಲೇ ಹಜಾರೆಯ ಪಾಸ್ ಪೋರ್ಟನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಕರೆದಿದ್ದಾರೆ. ತನಿಖೆ ಆರಂಭಿಸಲಾಗಿದೆ. 


ಹಜಾರೆಯನ್ನು ಅಧಿಕೃತವಾಗಿ ಬಂಧಿಸಲಾಗಿದೆಯಾದರೂ ಕೂಡ ಕಳೆದ ಗುರುವಾರ ರಾತ್ರಿ ಅವರನ್ನು ಹೊಟೇಲ್ ನಲ್ಲಿ ತಂಗಲು ಬಿಡಲಾಗಿತ್ತು. ಜಾಂಬೆಗಾಗಿ ಹುಡುಕಾಟ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com