ಸಂಸ್ಕೃತದಲ್ಲಿ ಟ್ವೀಟ್​ ಮಾಡಿ ಸುದ್ದಿಯಾದ​ ಪಾಪ್​ ತಾರೆ ಲೇಡಿ ಗಾಗಾ

ಅಮೆರಿಕದ ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅವರು ಮಾಡಿದ ಕಾರ್ಯ ಭಾರತೀಯರ ಮೆಚ್ಚುಗೆ ಗಳಿಸಿದೆ.

Published: 22nd October 2019 01:54 PM  |   Last Updated: 22nd October 2019 01:54 PM   |  A+A-


LadyGaga

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ನವದೆಹಲಿ: ಅಮೆರಿಕದ ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅವರು ಮಾಡಿದ ಕಾರ್ಯ ಭಾರತೀಯರ ಮೆಚ್ಚುಗೆ ಗಳಿಸಿದೆ.

ಹೌದು.. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತದಲ್ಲಿ ಟ್ವೀಟ್​ ಮಾಡುವ ಮೂಲಕ ಲೇಡಿಗಾಗಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಲೇಡಿ ಗಾಗಾ ಸಂಸ್ಕೃತದಲ್ಲಿ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಟ್ವೀಟ್​ ಮಾಡಿದ್ದಾರೆ. ಇದರ ಅರ್ಥ ಪ್ರಪಂಚದಲ್ಲಿರುವ ಎಲ್ಲರೂ ಸುಖ ಸಂತೋಷದಿಂದ ಜೀವನ ನಡೆಸಲಿ ಎಂಬುದಾಗಿದೆ.

ಇನ್ನು ಲೇಡಿಗಾಗಾ ಮಾಡಿರುವ ಈ ಟ್ವೀಟ್ ನ ಅರ್ಥ ತಿಳಿಯದ ಅವರ ಸಹಸ್ರಾರು ಅಭಿಮಾನಿಗಳು, ಇದು ಅವರ ಹೊಸ ಆಲ್ಬಂ ಹೆಸರೇ ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಇದರ ಅರ್ಥ ಹುಡುಕಾಟಕ್ಕೆ ಟ್ರಾನ್ಸ್​ಲೇಟರ್​ ಮೊರೆ ಹೋಗಿರುವುದಾಗಿ ತಿಳಿಸಿದ್ದಾರೆ.

ಆದರೆ ಭಾರತದ ಅವರ ಅಭಿಮಾನಿಗಳು ಮಾತ್ರ ಈ ಟ್ವೀಟ್​ಗೆ ಹರ್ಷ ವ್ಯಕ್ತಪಡಿಸಿದ್ದು, ವಿದೇಶಿಯರು ಸಂಸ್ಕೃತ ಕಲಿಯುತ್ತಿರುವುದು, ವೇದಗಳನ್ನು ಪಠಿಸುವುದು ಖುಷಿ ತಂದಿದೆ ಎಂದಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp