ಕನ್ನಡತಿ ಸವಿತಾ ಆತ್ಮಕ್ಕೆ ಕೊನೆಗೂ ಶಾಂತಿ: ಐರ್ಲೆಂಡ್ ನಲ್ಲಿ ಗರ್ಭಪಾತ, ಸಮಾನ ವಯಸ್ಸು ವಿವಾಹ ಕಾನೂನು ಬದ್ಧ

ಉತ್ತರ ಐರ್ಲೆಂಡ್‌ನಲ್ಲಿ ಗರ್ಭಪಾತ ಮತ್ತು ಸಮಾನ ವಯಸ್ಸು ಮದುವೆ ಶಾಸನ ಜಾರಿಗೊಳಿಸುವ ಯತ್ನಗಳು ವಿಫಲವಾಗುವುದರೊಂದಿಗೆ ಅಲ್ಲಿ ಇವು ಕಾನೂನು ಬದ್ಧಗೊಂಡಿವೆ.
ಸವಿತಾ ಹಾಲಪ್ಪನವರ್
ಸವಿತಾ ಹಾಲಪ್ಪನವರ್

ಬೆಲ್‌ಫಾಸ್ಟ್: ಉತ್ತರ ಐರ್ಲೆಂಡ್‌ನಲ್ಲಿ ಗರ್ಭಪಾತ ಮತ್ತು ಸಮಾನ ವಯಸ್ಸು ಮದುವೆ ಶಾಸನ ಜಾರಿಗೊಳಿಸುವ ಯತ್ನಗಳು ವಿಫಲವಾಗುವುದರೊಂದಿಗೆ ಅಲ್ಲಿ ಇವು ಕಾನೂನು ಬದ್ಧಗೊಂಡಿವೆ.

‘ಸುರಕ್ಷಿತ ಗರ್ಭಪಾತದ ಮಹಿಳೆಯರ ಹಕ್ಕು ಮತ್ತು ಸಮಾನ ವಯಸ್ಸು ವಿವಾಹ ಈಗ ಉತ್ತರ ಐರ್ಲೆಂಡ್‌ನಲ್ಲಿ ಕಾನೂನುಬದ್ಧವಾಗಿದೆ. ಇದು ಐತಿಹಾಸಿಕ ಕ್ಷಣವಾಗಿದೆ. ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಈ ಮಹತ್ವದ ವಿಜಯವನ್ನು ಸಾಧಿಸಲು ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.’ ಎಂದು ಯುನೈಟೆಡ್‌ ಕಿಂಗ್‌ಡಮ್‌ ಲೇಬರ್ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್ ಮಂಗಳವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಹಿಂದೆ ಐರ್ಲೆಂಡ್ ನಲ್ಲಿ ಬೆಳಗಾವಿ ಮೂಲದ ಸವಿತಾ ಹಾಲಪ್ಪನವರ್ ಅವರು ಗರ್ಭಪಾತಕ್ಕೆ ಬಲಿಯಾಗಿದ್ದರು. ಸವಿತಾ ಪೋಷಕರ ಅನೇಕ ವರ್ಷಗಳ ಕಾನೂನು ಹೋರಾಟದ ಬಳಿಕ ಈಗ ಐರ್ಲೆಂಡ್ ಸರ್ಕಾರ ಗರ್ಭಪಾತವನ್ನು ಕಾನೂನಾತ್ಮಕ ಗೊಳಿಸಿದೆ. ಆ ಮೂಲಕ ಸವಿತಾ ಹಾಲಪ್ಪನವರ್ ಆತ್ಮಕ್ಕೆ ಈ ಮೂಲಕ ಶಾಂತಿ ಲಭಿಸಿದಂತಾಗಿದೆ.

ಏನಿದು ಪ್ರಕರಣ?:
ಬೆಳಗಾವಿಯ ಶ್ರೀನಗರದ ನಿವಾಸಿಯಾಗಿದ್ದ ಸವಿತಾರನ್ನು ವೈದ್ಯ ಪ್ರವೀಣ್ ಜತೆಗೆ ಮದುವೆ ಮಾಡಿಕೊಡಲಾಗಿತ್ತು. ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿದ್ದರಿಂದ ಉದ್ಯೋಗ ಅರಸಿ ದೂರದ ಐರ್ಲೆಂಡ್ ದೇಶಕ್ಕೆ ತೆರಳಿದ್ದರು. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸವಿತಾಗೆ ಹೊಟ್ಟೆಯಲ್ಲಿ ನಂಜಾಗಿತ್ತು. ಗರ್ಭಪಾತ ಮಾಡಿದರೆ ಸವಿತಾ ಬದುಕುತ್ತಿದ್ದರು. ಆದರೆ ಈ ಚಿಕಿತ್ಸೆಗೆ ಅಲ್ಲಿನ ಗರ್ಭಪಾತ ನಿಷೇಧ ಕಾನೂನು ಅಡ್ಡಿಯಾಗಿತ್ತು.

ಐರ್ಲೆಂಡ್ ಕ್ಯಾತೊಲಿಕ್ ದೇಶವಾಗಿದ್ದರಿಂದ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ್ದರು. ಇದರಿಂದ ದಂತವೈದ್ಯೆ ಸವಿತಾ ಹಾಲಪ್ಪನವರ್ ಅಕ್ಟೋಬರ್ 28, 2013 ಮೃತಪಟ್ಟಿದ್ದರು. ಸವಿತಾ ಹಾಲಪ್ಪನವರ್ ಅವರ ಸಾವು ಪ್ರಕರಣ ಇಡೀ ವಿಶ್ವದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಐರ್ಲೆಂಡ್ ದೇಶದ ಕಾನೂನಿನ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿತ್ತು. ಐರ್ಲೆಂಡ್ ದೇಶದ ಮಾನವೀಯತೆ ಮತ್ತು ಸಂಪ್ರದಾಯದ ಬಗ್ಗೆ ವ್ಯಾಪಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿದ್ದವು.

ಮೃತ ಸವಿತಾ ಕುಟುಂಬಸ್ಥರು ಸಹ ಮಗಳ ಸಾವಿನ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ್ದರು. ಇದೀಗ ಐರ್ಲೆಂಡ್ ಸರ್ಕಾರ ಗರ್ಭಪಾತ ಮೇಲಿರುವ ನಿಷೇಧ ಕಾನೂನು ತಿದ್ದುಪಡಿ ಮಾಡಲು ಜನಾದೇಶ ಸಂಗ್ರಹಿಸಲು ಮುಂದಾಗಿದೆ. ಇಂದು ಐರ್ಲೆಂಡ್ ದೇಶದಲ್ಲಿ ಜನಮತ ಸಂಗ್ರಹ ನಡೆಯಲಿದೆ. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಮೃತ ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ, ಅಲ್ಲಿನ ಜನ ಗರ್ಭಪಾತ ನಿಷೇಧ ಕಾನೂನಿನ ವಿರುದ್ಧವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ನನ್ನ ಮಗಳಿಗೆ ಆಗಿರುವ ಅನ್ಯಾಯ ಮತ್ಯಾವ ಕುಟುಂಬಕ್ಕೆ ಆಗದಂತೆ ತಡೆಯಬೇಕು ಎಂದು ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com