ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಮಾನವ ಹಕ್ಕು ಸಂಘಟನೆಗಳು ನಿರ್ಲಕ್ಷಿಸಿತ್ತು: ಕಾಶ್ಮೀರಿ ಪತ್ರಕರ್ತೆ

ಕಳೆದ 30 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆ ಚಟುವಟಿಕೆಗಳು ನಡೆಯುತ್ತಿದ್ದರು ಮಾನವ ಹಕ್ಕುಗಳ ಆಯೋಗ ಕಣ್ಮುಚ್ಚಿ ಕುಳಿತಿತ್ತು ಎಂದು ಕಾಶ್ಮೀರಿ ಪತ್ರಕರ್ತೆ ಆರತಿ ಟಿಕೊ ಸಿಂಗ್ ಹೇಳಿದ್ದಾರೆ. 
ಆರತಿ ಟಿಕೊ ಸಿಂಗ್
ಆರತಿ ಟಿಕೊ ಸಿಂಗ್

ವಾಷಿಂಗ್ಟನ್: ಕಳೆದ 30 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆ ಚಟುವಟಿಕೆಗಳು ನಡೆಯುತ್ತಿದ್ದರು ಮಾನವ ಹಕ್ಕುಗಳ ಆಯೋಗ ಕಣ್ಮುಚ್ಚಿ ಕುಳಿತಿತ್ತು ಎಂದು ಕಾಶ್ಮೀರಿ ಪತ್ರಕರ್ತೆ ಆರತಿ ಟಿಕೊ ಸಿಂಗ್ ಹೇಳಿದ್ದಾರೆ. 

ಅಮೆರಿಕ ಕಾಂಗ್ರೆಸ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಾಷಿಂಗ್ಟನ್ ನಲ್ಲಿ ಆಯೋಜಿಸಿದ್ದ ಸಮಾಲೋಚನೆ ವೇಳೆ ಆರತಿ ಟಿಕೊ ಸಿಂಗ್ ಈ ಆರೋಪ ಮಾಡಿದ್ದು ಅಮೆರಿಕ ಕಾಂಗ್ರೆಸ್ ಸಮಾಲೋಚನೆಯೂ ಪೂರ್ವಗ್ರಪೀಡಿತವಾಗಿದೆ. ಭಾರತದ ವಿರುದ್ಧ ಮತ್ತು ಪಾಕ್ ಪರ ಧೋರಣೆ ಹೊಂದಿದೆ ಎಂದು ನೇರ ಆರೋಪ ಮಾಡಿದರು.

ಪಾಕಿಸ್ತಾನ ಕೌರ್ಯದಿಂದ 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರು ತಮ್ಮ ಮನೆಗಳನ್ನು ಬಿಡುವಂತಾಯಿತು. ಅಲ್ಲದೆ 15 ಸಾವಿರ ಕಾಶ್ಮೀರಿ ಮುಸ್ಲಿಂರ ಸಾವಿನ ಬಗ್ಗೆ ಈ ಸಮಾಲೋಚನೆಯೂ ಕಿಂಚಿತ್ತೂ ಸಹಾನೂಭೂತಿ ಹೊಂದಿಲ್ಲ ಎಂದು ಆರತಿ ನೇರ ಮಾತುಗಳಿಂದ ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com