ಬ್ರೆಜಿಲ್ ಗೆ ಹೋಗುವ ಭಾರತ ಮತ್ತು ಚೀನಾ ನಾಗರಿಕರಿಗೆ ವೀಸಾದಿಂದ ವಿನಾಯ್ತಿ

ಪ್ರವಾಸ ಅಥವಾ ಉದ್ಯಮ, ವ್ಯಾಪಾರ ಉದ್ದೇಶಗಳಿಗೆ ಬ್ರೆಜಿಲ್ ಗೆ ಹೋಗಬೇಕಾದರೆ ಚೀನಾ ಮತ್ತು ಭಾರತ ದೇಶದ ನಾಗರಿಕರು ವೀಸಾ ಹೊಂದಬೇಕಾಗಿಲ್ಲ ಎಂದು ಬ್ರೆಜಿಲ್ ನ ಅಧ್ಯಕ್ಷ ಜೈರ್ ಬೊಲ್ಸನರೊ ತಿಳಿಸಿದ್ದಾರೆ. 
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ

ಬೀಜಿಂಗ್: ಪ್ರವಾಸ ಅಥವಾ ಉದ್ಯಮ, ವ್ಯಾಪಾರ ಉದ್ದೇಶಗಳಿಗೆ ಬ್ರೆಜಿಲ್ ಗೆ ಹೋಗಬೇಕಾದರೆ ಚೀನಾ ಮತ್ತು ಭಾರತ ದೇಶದ ನಾಗರಿಕರು ವೀಸಾ ಹೊಂದಬೇಕಾಗಿಲ್ಲ ಎಂದು ಬ್ರೆಜಿಲ್ ನ ಅಧ್ಯಕ್ಷ ಜೈರ್ ಬೊಲ್ಸನರೊ ತಿಳಿಸಿದ್ದಾರೆ.


ಆರಂಭದಲ್ಲಿ ಯಾವುದೇ ಶುಲ್ಕವಿರುವುದಿಲ್ಲ. ಅಮೆರಿಕಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಕೆನಡಾ ದೇಶಗಳ ನಾಗರಿಕರಿಗೆ ಈಗಾಗಲೇ ಅಲ್ಪಾವಧಿಯ ಪ್ರವಾಸಿ ಮತ್ತು ಉದ್ಯಮ ವೀಸಾಗಳಿಂದ ವಿನಾಯ್ತಿ ನೀಡಲಾಗಿದೆ. ಮುಂದೆ ಭಾರತಕ್ಕೂ ನೀಡುತ್ತೇವೆ ಎಂದು ಅಧ್ಯಕ್ಷರು ಹೇಳಿರುವುದಾಗಿ ಬ್ರೆಜಿಲ್ ನ ಪತ್ರಿಕೆ ವರದಿ ಮಾಡಿದೆ.


ಚೀನಾದಲ್ಲಿ ಸುಮಾರು 1.39 ಶತಕೋಟಿ ಜನರಿದ್ದು ಭಾರತದಲ್ಲಿ 1.3 ಶತಕೋಟಿ ಜನರಿದ್ದಾರೆ. ಪ್ರವರ್ಧಮಾನ ಹೊಂದುತ್ತಿರುವ ಇತರ ದೇಶಗಳಾದ ರಷ್ಯಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳ ಜೊತೆ ಭಾರತ ಮತ್ತು ಚೀನಾ ದೇಶಗಳು ಸಹ ಬ್ರಿಕ್ಸ್ ದೇಶಗಳ ಸದಸ್ಯ ರಾಷ್ಟ್ರಗಳಾಗಿವೆ.


ನಿನ್ನೆ ಚೀನಾಕ್ಕೆ ಭೇಟಿ ಕೊಟ್ಟಿರುವ ಬೊಲ್ಸನರೊ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಲಿ ಕೆಕ್ವಿಯಾಂಗ್ ಅವರನ್ನು ಭೇಟಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com