ಬಿಪಿನ್ ರಾವತ್  ಬೇಜವಾಬ್ದಾರಿಯುತ ಹೇಳಿಕೆ, ಯುದ್ಧಕ್ಕೆ ಪ್ರಚೋದನೆ-  ಪಾಕಿಸ್ತಾನ ಸೇನೆ 

ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪದೇ ಪದೇ ಬೇಜವಾಬ್ದಾರಿಯುತ ಹಾಗೂ ಪ್ರಾದೇಶಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆ ನೀಡುವ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಾಕಿಸ್ತಾನ ಸೇನೆ ಆರೋಪಿಸಿದೆ.
ಅಸಿಫ್ ಘಾಪೂರ್
ಅಸಿಫ್ ಘಾಪೂರ್

ಇಸ್ಲಾಮಾಬಾದ್ : ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪದೇ ಪದೇ ಬೇಜವಾಬ್ದಾರಿಯುತ ಹಾಗೂ ಪ್ರಾದೇಶಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆ ನೀಡುವ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಾಕಿಸ್ತಾನ ಸೇನೆ ಆರೋಪಿಸಿದೆ.

ಪಿಒಕೆ ಉಗ್ರರ ನಿಯಂತ್ರಣದಲ್ಲಿರುವ ಪಾಕಿಸ್ತಾನದ ಭಾಗವಾಗಿದೆ ಎಂದು ಬಿಪಿನ್ ರಾವತ್ ವರ್ಣಿಸಿದ ಬೆನ್ನಲ್ಲೇ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರ್ ಅಸಿಫ್ ಘಾಪೂರ್ ಈ ರೀತಿಯಲ್ಲಿ  ಪ್ರತಿಕ್ರಿಯಿಸಿದ್ದಾರೆ.

ಹೊಸದಾಗಿ ಪ್ರಸ್ತಾಪಿಸಿರುವ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಸ್ಥಾನದ ಮೇಲೆ ಕಣ್ಣಿಟ್ಟು , ಬಿಪಿನ್ ರಾವತ್ ಈ ರೀತಿಯ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ ಎಂದು ಘಾಪೂರ್ ಟೀಕಿಸಿದ್ದಾರೆ.

ಆದಾಗ್ಯೂ, ಘಾಪೂರ್ ಹೇಳಿಕೆಗೆ ಭಾರತೀಯ ಸೇನೆಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಾಕಿಸ್ತಾನದ ನಿರಾಧಾರ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com