ವಿಮಾನದಲ್ಲಿ ಸೆಕ್ಸ್: ಮಹಿಳಾ ಸಿಬ್ಬಂದಿಯಿಂದ ವಿಡಿಯೋ ಸೆರೆ! 

ಕಾಮಾತುರಾಣಾಂ ನ ಭಯಂ ನ ಲಜ್ಜಾ ಎಂಬ ಮಾತಿದೆ. ಅದರಂತೆಯೇ ವಿಮಾನದಲ್ಲಿ ಪ್ರಯಾಣಿಕರ ನಡುವೆಯೇ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಇದನ್ನು ನೋಡಿದ ಮಹಿಳಾ ಸಿಬ್ಬಂದಿಗಳು ಅವರನ್ನು ತಡೆದಿದ್ದಾರೆ. 
ವಿಮಾನದಲ್ಲಿ ಸೆಕ್ಸ್: ಮಹಿಳಾ ಸಿಬ್ಬಂದಿಯಿಂದ ವಿಡಿಯೋ ಸೆರೆ! 

ಮಾಸ್ಕೋ: ಕಾಮಾತುರಾಣಾಂ ನ ಭಯಂ ನ ಲಜ್ಜಾ ಎಂಬ ಮಾತಿದೆ. ಅದರಂತೆಯೇ ವಿಮಾನದಲ್ಲಿ ಪ್ರಯಾಣಿಕರ ನಡುವೆಯೇ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಇದನ್ನು ನೋಡಿದ ಮಹಿಳಾ ಸಿಬ್ಬಂದಿಗಳು ಅವರನ್ನು ತಡೆದಿದ್ದಾರೆ. 

ಮಾಸ್ಕೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವರು ವಿಮಾನ ನಿಲ್ದಾಣದಲ್ಲಷ್ಟೇ ಭೇಟಿಯಾಗಿದ್ದರು ಎಂಬುದು ಮತ್ತೊಂದು ಅಘಾತಕಾರಿ ಮಾಹಿತಿಯಾಗಿದೆ. 

ವಿಮಾನದಲ್ಲಿ ಪಕ್ಕದಲ್ಲೇ ಕುಳಿತ 40 ರ ಆಸುಪಾಸಿನ ಪುರುಷ-ಮಹಿಳೆ ಇಬ್ಬರೂ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಮಹಿಳಾ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ವಿಮಾನ ಸಿಬ್ಬಂದಿಗಳು ನೀಡಿರುವ ಮಾಹಿತಿಯ ಪ್ರಕಾರ ಇಬ್ಬರೂ ಪಾನಮತ್ತರಾಗಿ ಸೆಕ್ಸ್ ಮಾಡುತ್ತಿದ್ದರು. 

ತಕ್ಷಣವೇ ಇಬ್ಬರನ್ನೂ ತಡೆದ ಸಿಬ್ಬಂದಿಗಳು, ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದು, ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಆದರೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ವಿಮಾನ ಸಿಬ್ಬಂದಿಯನ್ನೇ ಪ್ರಶ್ನಿಸಿದ್ದಾನೆ ಎಂದು ತಿಳಿದುಬಂದಿದೆ. ವ್ಯಕ್ತಿ ವ್ಲಾಡಿವೋಸ್ಟಾಕ್ ನಿವಾಸಿಯಾಗಿದ್ದು, ಮಹಿಳೆ ನಖೋಡ್ಕಾದವರು ಎಂದು ತಿಳಿದುಬಂದಿದೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com