ಇಸಿಸ್ ಮುಖ್ಯಸ್ಥ ಬಾಗ್ದಾದಿಯ 'ಉತ್ತರಾಧಿಕಾರಿ'ಯನ್ನು ಹೊಡೆದುರುಳಿಸಿದ ಅಮೇರಿಕಾ

ಸಿರಿಯಾದಲ್ಲಿ ಅಮೆರಿಕದ ದಾಳಿಯಲ್ಲಿ ಮೃತಪಟ್ಟ ಇಸ್ಲಾಮಿಕ್ ಸ್ಟೇಟ್ ನಾಯಕ ಮತ್ತು ವಿಶ್ವದ ನಂಬರ್ ಒನ್ ಯೋತ್ಪಾದಕ ಅಬೂಬಕರ್ ಅಲ್-ಬಾಗ್ದಾದಿ ನಿಕಟ ಉತ್ತರಾಧಿಕಾರಿಯನ್ನೂ ಇದೀಗ ಅಮೆರಿಕಾ ಪಡೆಗಳು ಹತ್ಯೆ ಮಾಡಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಇಸ್ಲಾಮಿಕ್ ಸ್ಟೇಟ್

"ಅಬೂಬಕರ್ ಅಲ್-ಬಾಗ್ದಾದಿಯ ನಿಕಟ ಉತ್ತರಾಧಿಕಾರಿಯನ್ನು ಅಮೆರಿಕದ ಸೈನ್ಯವು ಕೊನೆಗೊಳಿಸಿದೆ ಎಂದು ಇದೀಗ ಖಚಿತವಾಗಿದೆ.ಯಾರು ಬಾಗ್ದಾದಿಯ ಉತ್ತರಾಧಿಕಾರಿಯಾಗುವ ಎಲ್ಲಾ ಸಾಧ್ಯತೆ ಇತ್ತೋ ಇದೀಗ ಅವನೂ ಸಾವನ್ನಪ್ಪಿದ್ದಾನೆ" " ಟ್ರಂಪ್ ಟ್ವೀಟ್ ಮಾಡಿದ್ದಾರೆ. 

ಆದರೆ ಬಾಗ್ದಾದಿಯ ಆಉತ್ತರಾಧಿಕಾರಿ ಯಾರು ಎಂಬ ಹೆಸರನ್ನು ಮಾತ್ರ ಟ್ರಂಪ್ ಎಲ್ಲಿಯೂ ಬಹಿರಂಗ ಮಾಡಿಲ್ಲ. ಅಲ್ಲದೆ ಟ್ರಂಪ್ ಆ "ಉತ್ತರಾಧಿಕಾರಿ" ಸಾವಿಗೆ ಕಾರಣವಾದ ಕಾರ್ಯಾಚರಣೆ ವಿವರವನ್ನೂ ತಿಳಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com