'ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ಥಾನ್ ಹಮಾರ...' ಭಾರತವನ್ನು ಹೊಗಳಿ ಹಾಡಿದ ಪಾಕಿಸ್ತಾನ ನಾಯಕ! 

ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಪಾಕ್ ನ ಎಲ್ಲಾ ರಾಜಕಾರಣಿಗಳೂ ವಿರೋಧಿಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಎಂಕ್ಯುಎಂ ನ ನಾಯಕ ಅಲ್ತಾಫ್ ಹುಸೇನ್ ಮಾತ್ರ ಭಾರತದ ಪರ ನಿಂತಿದ್ದಾರೆ. 

Published: 01st September 2019 10:49 AM  |   Last Updated: 01st September 2019 10:53 AM   |  A+A-


MQM leader Altaf Hussain

ಎಂಕ್ಯುಎಂ ನ ನಾಯಕ ಅಲ್ತಾಫ್ ಹುಸೇನ್

Posted By : Srinivas Rao BV
Source : Online Desk

ಇಸ್ಲಾಮಾಬಾದ್: ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಪಾಕಿಸ್ತಾನದ ಪ್ರಧಾನಿಯಾದಿಯಾಗಿ ಎಲ್ಲಾ ರಾಜಕಾರಣಿಗಳೂ ವಿರೋಧಿಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಎಂಕ್ಯುಎಂ ನ ನಾಯಕ ಅಲ್ತಾಫ್ ಹುಸೇನ್ ಮಾತ್ರ ಭಾರತದ ಪರ ನಿಂತಿದ್ದಾರೆ. 

ಬೆಂಬಲಿಗರನ್ನುದ್ದೇಶಿಸಿ ಮಾತನಾಡಿರುವ ಪಾಕಿಸ್ತಾನದ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ (ಎಂಕ್ಯುಎಂ) ಸ್ಥಾಪಕ ಅಲ್ತಾಫ್ ಹುಸೇನ್, ಆರ್ಟಿಕಲ್ 370 ರದ್ದತಿ ಭಾರತದ ಆಂತರಿಕ ವಿಷಯ, ಇದರಲ್ಲಿ ಪಾಕಿಸ್ತಾನ ಮಧ್ಯಪ್ರವೇಶಿಸಬಾರದು ಎಂದು ಹೇಳಿದ್ದು, ಸಾರೇ ಜಹಾನ್ ಸೇ ಅಚ್ಚಾ ಹಾಡನ್ನು ಹೆಮ್ಮೆಯಿಂದ ಹಾಡಿದ್ದಾರೆ.

ಭಾರತ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯ, ಭಾರತೀಯರ ಬೆಂಬಲ ಪಡೆದೇ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹುಸೇನ್ ಹೇಳಿದ್ದಾರೆ. 

ಇದೇ ವೇಳೆ ಪಾಕಿಸ್ತಾನದ ಸರ್ಕಾರ ಹಾಗೂ ಸೇನೆ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಹುಸೇನ್,  ಸರ್ಕಾರ ಹಾಗೂ ಸೇನೆ ಎರಡೂ 72 ವರ್ಷಗಳಿಂದ ಪಾಕಿಸ್ತಾನಿಯರನ್ನು ಕಾಶ್ಮೀರದ ವಿಷಯದಲ್ಲಿ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp