ಇಡೀ ಪಾಕ್ ಒಗ್ಗೂಡಿದೆ, ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುತ್ತದೆ: ಖುರೇಷಿ 

ಇಡೀ ಪಾಕಿಸ್ತಾನ ಒಗ್ಗಟ್ಟಿನಿಂದ ಇದೆ, ದೇಶದ ಸ್ಥಿರತೆ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಹೇಳಿದ್ದಾರೆ. 
ಶಾ ಮೆಹ್ಮೂದ್ ಖುರೇಷಿ
ಶಾ ಮೆಹ್ಮೂದ್ ಖುರೇಷಿ

ಇಸ್ಲಾಮಾಬಾದ್: ಇಡೀ ಪಾಕಿಸ್ತಾನ ಒಗ್ಗಟ್ಟಿನಿಂದ ಇದೆ, ದೇಶದ ಸ್ಥಿರತೆ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಹೇಳಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಭಾರತದೊಂದಿಗೆ ತಿಕ್ಕಾಟ ಉಂಟಾಗಿರುವ ನಡುವೆ ಶಾ ಮೆಹ್ಮೂದ್ ಖುರೇಷಿ ಈ ಹೇಳಿಕೆ ನೀಡಿದ್ದಾರೆ. 

ಇದೇ ವೇಳೆ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿರುವ ಖುರೇಷಿ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸೆ.2 ರಂದು ಚರ್ಚೆ ನಡೆಸಬೇಕೆಂಬ ಪಾಕಿಸ್ತಾನದ ಮನವಿಯನ್ನು ಸ್ವೀಕರಿಸದಂತೆ ಇರೋಪಿಯನ್ ಒಕ್ಕೂಟದ ಮೇಲೆ ಭಾರತ ಒತ್ತಡ ಹೇರಲು ವ್ಯರ್ಥ ಯತ್ನ ಮಾಡಿತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com