ಮಾನವ ಹಕ್ಕುಗಳ ಬಗ್ಗೆ ಮಾತನಾಡಲು ಪಾಕ್‌ಗೆ ಯಾವ ನೈತಿಕತೆ ಇದೆ: ಭಾರತ

ಮಾಲ್ಡೀವ್ಸ್‌ನಲ್ಲಿ ಭಾನುವಾರ ನಡೆದ ಸ್ಪೀಕರ್‌ಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಭಾರತೀಯ ನಿಯೋಗ, ಕಾಶ್ಮೀರ ಸಮಸ್ಯೆಯನ್ನು ಎತ್ತಿದ ಪಾಕಿಸ್ತಾನಿ ಪ್ರತಿನಿಧಿಗಳ ಕ್ರಮವನ್ನು ಸ್ಥಳದಲ್ಲೇ ಖಂಡಿಸಿದ್ದಾರೆ.
ಸ್ಪೀಕರ್‌ಗಳ ಸಮಾವೇಶದಲ್ಲಿ ಓಂ ಬಿರ್ಲಾ
ಸ್ಪೀಕರ್‌ಗಳ ಸಮಾವೇಶದಲ್ಲಿ ಓಂ ಬಿರ್ಲಾ

ಮಾಲೆ: ಮಾಲ್ಡೀವ್ಸ್‌ನಲ್ಲಿ ಭಾನುವಾರ ನಡೆದ ಸ್ಪೀಕರ್‌ಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಭಾರತೀಯ ನಿಯೋಗ, ಕಾಶ್ಮೀರ ಸಮಸ್ಯೆಯನ್ನು ಎತ್ತಿದ ಪಾಕಿಸ್ತಾನಿ ಪ್ರತಿನಿಧಿಗಳ ಕ್ರಮವನ್ನು ಸ್ಥಳದಲ್ಲೇ ಖಂಡಿಸಿದ್ದಾರೆ.

ಮಾತ್ರವಲ್ಲ, ಇಸ್ಲಾಮಾಬಾದ್ ತಮ್ಮ ದೇಶದಲ್ಲಿ ಹೇಗೆ 'ನರಮೇಧ ಮಾಡಿದೆ' ಎಂಬುದು ಜಗತ್ತಿಗೆ ತಿಳಿದಿದೆ, ಇದು ಈಗ ಬಾಂಗ್ಲಾದೇಶ ಎಂಬ ಸ್ವತಂತ್ರ ದೇಶವಾಗಿದೆ ಎಂದು ನಿಯೋಗ ಟಾಂಗ್ ನೀಡಿದೆ. "ಅವರು ತಮ್ಮ ದೇಶದ ಒಂದು ಭಾಗದಲ್ಲಿ ಹೇಗೆ ನರಮೇಧವನ್ನು ಮಾಡಿದ್ದಾರೆಂದು ಜಗತ್ತಿಗೆ ತಿಳಿದಿದೆ, ಆ ಭಾಗ, ಈಗ ಬಾಂಗ್ಲಾದೇಶ ಎಂದು ಕರೆಯಲ್ಪಡುವ ಪ್ರತ್ಯೇಕ ದೇಶವಾಗಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಈ ದೇಶಕ್ಕೆ (ಪಾಕಿಸ್ತಾನ) ಯಾವ ನೈತಿಕ ಹಕ್ಕುಗಳಿವೆ ಎಂದು ನಾನು ಕೇಳಲು ಬಯಸುತ್ತೇನೆ. ಅವರು ಕಾಶ್ಮೀರದ ಮಾನವ ಹಕ್ಕುಗಳ ಸಮಸ್ಯೆಯನ್ನು ಎತ್ತಿದ್ದರಿಂದ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆಯಲ್ಪಡುವ ನಮ್ಮ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಸಿಂಗ್ ಹೇಳಿದರು.

ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಅದಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ಕೊನೆಗೊಳಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಈ ವೇದಿಕೆಯಲ್ಲಿ ಭಾರತದ ಆಂತರಿಕ ವಿಷಯಗಳನ್ನು ಎತ್ತುವುದನ್ನು ನಾವು ಬಲವಾಗಿ ಆಕ್ಷೇಪಿಸುತ್ತೇವೆ ಎಂದು ಹರಿವಂಶ್ ಸಿಂಗ್ ಹೇಳಿದರು. ಅಂತೆಯೇ ಎರಡು ದಿನಗಳ ನಾಲ್ಕನೇ ದಕ್ಷಿಣ ಏಷ್ಯಾದ ಸ್ಪೀಕರ್‌ಗಳ ಶೃಂಗಸಭೆಯನ್ನು ಮಾಲ್ಡೀವ್ಸ್‌ನಲ್ಲಿ ಆಯೋಜಿಸಲಾಗಿದೆ. 'ಸುಸ್ಥಿರ ಗುರಿಗಳನ್ನು ಸಾಧಿಸುವುದು' ಎಂಬ ವಿಷಯ ಸಮಾವೇಶದ ಧ್ಯೇಯವಾಗಿದ್ದು, ಸೋಮವಾರ ಕೂಡ ಸಮಾವೇಶ ಮುಂದುವರಿಯಲಿದೆ.

'ಭಯೋತ್ಪಾದನೆ ಇಂದು ಇಡೀ ಮಾನವೀಯತೆ ಮತ್ತು ಜಗತ್ತಿಗೆ ದೊಡ್ಡ ಬೆದರಿಕೆಯಾಗಿದೆ. ಆದ್ದರಿಂದ, ಈ ಸಮಾವೇಶದಲ್ಲಿ ಇಂತಹ ಹೇಳಿಕೆಗಳನ್ನು ನೀಡಲು ತಾವು ಅವಕಾಶ ನೀಡಬಾರದು" ಎಂದು ಅವರು ಮಾಲ್ಡೀವ್ಸ್‌ನ ಮಜ್ಲಿಸ್‌ನ ಸ್ಪೀಕರ್ ಮೊಹಮ್ಮದ್ ನಶೀದ್ ಮತ್ತು ಪ್ರಧಾನ ಕಾರ್ಯದರ್ಶಿ ಐಪಿಯು ಮಾರ್ಟಿನ್ ಅವರನ್ನು ಉದ್ದೇಶಿಸಿ ಹೇಳಿದರು. ಆಗ ಅವರು, ಈ ಶೃಂಗಸಭೆಯು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಚರ್ಚಿಸಲು ಮಾತ್ರ ಸೀಮಿತವಾಗಿದೆ ಎಂದು ಪುನರಾವರ್ತಿಸಿದರು. ಈ ಶೃಂಗಸಭೆಯ ವಿಷಯಕ್ಕೆ ಹೊರತಾದ ಬೇರೆ ಸಮಸ್ಯೆಗಳನ್ನು ಎತ್ತುವ ಮೂಲಕ ವೇದಿಕೆಯನ್ನು ರಾಜಕೀಯಗೊಳಿಸುವುದನ್ನು ನಾವು ತಿರಸ್ಕರಿಸುತ್ತೇವೆ ಎಂದು ಹರಿವಂಶ್ ಹೇಳಿದರು.

'ಸುಸ್ಥಿರ ಗುರಿಗಳನ್ನು ಸಾಧಿಸುವುದು' ಕುರಿತ ಎರಡು ದಿನಗಳ ನಾಲ್ಕನೇ ದಕ್ಷಿಣ ಏಷ್ಯಾದ ಸ್ಪೀಕರ್‌ಗಳ ಶೃಂಗಸಭೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಭಾರತೀಯ ಸಂಸದೀಯ ನಿಯೋಗ ತೆರಳಿದ್ದು, ನಿಯೋಗದಲ್ಲಿ ಲೋಕಸಭಾ ಪ್ರಧಾನ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ಮತ್ತು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಕೂಡ ಇದ್ದಾರೆ. ಭಾರತ ಮತ್ತು ಪಾಕಿಸ್ತಾನದ ಹೊರತಾಗಿ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ ಮತ್ತು ಶ್ರೀಲಂಕಾದ ಅಧ್ಯಕ್ಷರು ವೇದಿಕೆಯ ಪ್ರಿಸೈಡಿಂಗ್ ಆಫೀಸರ್‌ಗಳು ಸ್ಪೀಕರ್ ವೇದಿಕೆಯನ್ನು ರಚಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com