ಪರಮಾಣು ಸಂಶೋಧನಾ ನಿರ್ಬಂಧ ತೆರವುಗೊಳಿಸಿದ ಇರಾನ್ ಅಧ್ಯಕ್ಷ ರೌಹಾನಿ

ಇರಾನ್ ತನ್ನ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವಿಸ್ತರಿಸಲಿದೆ ಎಂದು ಅಧ್ಯಕ್ಷ ಹಸನ್ ರೌಹಾನಿ ಬುಧವಾರ ತಡರಾತ್ರಿ ಹೇಳಿದ್ದಾರೆ.

Published: 05th September 2019 11:48 AM  |   Last Updated: 05th September 2019 11:51 AM   |  A+A-


Rohani-iran

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಇರಾನ್ ನಿಂದ ಮತ್ತಷ್ಟು ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿ ವಿಸ್ತರಣೆ

ತೆಹ್ರಾನ್: ಇರಾನ್ ತನ್ನ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವಿಸ್ತರಿಸಲಿದೆ ಎಂದು ಅಧ್ಯಕ್ಷ ಹಸನ್ ರೌಹಾನಿ ಬುಧವಾರ ತಡರಾತ್ರಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2015 ರ ಪರಮಾಣು ಒಪ್ಪಂದದನ್ವಯ ದೇಶದ ಮೇಲೆ ಹೇರಲಾಗಿದ್ದ ಪರಮಾಣು ಸಂಶೋಧನಾ ನಿರ್ಬಂಧಗಳನ್ನು ಜಂಟಿ ಸಮಗ್ರ ಕ್ರಿಯಾಯೋಜನೆಯನ್ವಯ ಇರಾನ್ ತೆರವುಗೊಳಿಸಲಿದೆ ಎಂದು ಹೇಳಿದ್ದಾರೆ. ಆ ಮೂಲಕ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿ ಇರಾನ್ ಮುಕ್ತವಾಗಿದೆ ಎಂದು ರೌಹಾನಿ ಹೇಳಿದ್ದಾರೆ.

ಇರಾನ್ ನ ಪರಮಾಣು ಶಕ್ತಿ ಸಂಘ (ಎಇಒಐ) ದೇಶದ ತಾಂತ್ರಿಕ ಅಗತ್ಯಗಳಿಗೆ ತಕ್ಕಂತೆ ಕೂಡಲೇ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಿದ್ಧವಾಗಿದೆ. ವಿಜ್ಞಾನಿಗಳು ಈ ಹಿಂದಿನ ಎಲ್ಲ ಯೋಜನೆಗಳನ್ನು ಮತ್ತು ಚಾಲ್ತಿಯಲ್ಲಿರುವ ಯೋಜನೆಗಳನ್ನು ಬದಿಗೊತ್ತಿ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ಎಂದು ರೌಹಾನಿ ಕರೆ ನೀಡಿದ್ದಾರೆ.

ತಾಂತ್ರಿಕ ಅಗತ್ಯಗಳನ್ನೇ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಮತ್ತು ಶಾಂತಿಯುತ ಚೌಕಟ್ಟಿನಲ್ಲಿ ನಡೆಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಇರಾನ್ ಮತ್ತು ಯೂರೋಪ್ ನಡುವೆ ಮಾತುಕತೆ ಪ್ರಗತಿಯಲ್ಲಿದ್ದು ಇರನ್ ನ ಪರಮಾಣು ಒಪ್ಪಂದ ಕುರಿತಂತೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಹೀಗಾಗಿ ಇರಾನ್ ಪರಮಾಣು ಒಪ್ಪಂದದ ತನ್ನ ಬದ್ಧತೆಗಾಗಿ ಮಹತ್ವ ನಿರ್ಧಾರ ಘೋಷಿಸಲಿದೆ ಎಂದು ರೌಹಾನಿ ಹೇಳಿದ್ದಾರೆ. 

ಈ ಮುಖ್ಯ ಹೆಜ್ಜೆ ಇರಾನ್ ನ ಪರಮಾಣು ಚಟುವಟಿಕೆಗಳಿಗೆ ಚುರುಕು ನೀಡಲಿದ್ದು ಅಭೂತಪೂರ್ವ ಫಲಿತಾಂಶ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರಮಾಣು ಒಪ್ಪಂದದಿಂದ ಅಮೆರಿಕ ದೂರ ಸರಿದ ನಂತರ ಕಳೆದ ಮೇ ತಿಂಗಳಲ್ಲಿ ಇರಾನ್ ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಲು ಆರಂಭಿಸಿತ್ತು.

ಇನ್ನು ಇರಾನ್ ಮೇಲೆ ನಿರ್ಬಂಧ ಹೇರಿರುವ ಅಮೆರಿಕ ಇರಾನ್ ನ ಇಂಧನ ಶಿಪಿಂಗ್ ಮೇಲೂ ನಿರ್ಬಂಧ ಹೇರುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರೌಹಾನಿ ಇಂತಹ ನಿರ್ಣಯ ಕೈಗೊಂಡಿದ್ದಾರೆ. ರೌಹಾನಿ ನಿರ್ಧಾರದ ಬಳಿಕ ವಿವಿಧ ಹೊಸ ಸೆಂಟ್ರಿಫ್ಯೂಗ್ ಮತ್ತು ಯೂರೇನಿಯಂ ಹೆಚ್ಚಳವನ್ನು ಶೀಘ್ರವಾಗಿ ಹೊಂದಲು ಎಇಒಐ ತನ್ನ ಸಂಶೋಧನಾ ಚಟುವಟಿಕೆಗಳನ್ನು ವಿಸ್ತರಿಸುವ ನಿರೀಕ್ಷೆ ಇದೆ.

ಅಂತೆಯೇ ಅಮೆರಿಕ ನಿರ್ಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಯೂರೋಪಿಯನ್ ಒಕ್ಕೂಟದ ವಿರುದ್ಧವೂ ಕಿಡಿಕಾರಿರುವ ರೌಹಾನಿ, ಶುಕ್ರವಾರದ ಒಳಗೆ ನಿಮ್ಮ ನಿರ್ಧಾರ ಪ್ರಕಟಿಸದಿದ್ದರೆ ಅಥವಾ ಸಮಸ್ಯೆ ಪರಿಹಾರಕ್ಕೆ ಸಲಹೆ ಸೂಚಿಸದಿದ್ದರೆ ಕಠಿಣ ನಿಲುವು ತಳೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp