ಮಲೇಷ್ಯಾ ಪ್ರಧಾನಿ ಜೊತೆ ಮೋದಿ ಮಾತುಕತೆ: ಝಾಕಿರ್ ನಾಯ್ಕ್ ಗಡಿಪಾರು ಕುರಿತು ಚರ್ಚೆ

ರಷ್ಯಾದಲ್ಲಿ ಈಸ್ಟ್ರನ್ ಎಕಾನಾಮಿಕ್ ಪೋರ್ಮ್ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾ ಪ್ರಧಾನಿ ಮಹತಿರ್ ಬಿನ್ ಮೊಹಮ್ಮದ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 
ಮಲೇಷ್ಯಾ ಪ್ರಧಾನಿ ಜೊತೆ ಮೋದಿ ಮಾತುಕತೆ: ಝಾಕಿರ್ ನಾಯ್ಕ್ ಗಡಿಪಾರು ಕುರಿತು ಚರ್ಚೆ
ಮಲೇಷ್ಯಾ ಪ್ರಧಾನಿ ಜೊತೆ ಮೋದಿ ಮಾತುಕತೆ: ಝಾಕಿರ್ ನಾಯ್ಕ್ ಗಡಿಪಾರು ಕುರಿತು ಚರ್ಚೆ

ವ್ಲಾದಿವೋಸ್ಕೋಟ್: ರಷ್ಯಾದಲ್ಲಿ ಈಸ್ಟ್ರನ್ ಎಕಾನಾಮಿಕ್ ಪೋರ್ಮ್ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾ ಪ್ರಧಾನಿ ಮಹತಿರ್ ಬಿನ್ ಮೊಹಮ್ಮದ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

ಭಾರತದ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಗಡಿಪಾರು ಮಾಡುವ ವಿಷಯ, ಜಮ್ಮು-ಕಾಶ್ಮೀರದಲ್ಲಿ ಜಾರಿಗೆ ತಂರ್ದಿರುವ ಕಾನೂನಾತ್ಮಕ ಬದಲಾವಣೆಗಳ ಅಗತ್ಯತೆಗ ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚೆಯಾಗಿದೆ. 

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ದ್ವಿಪಕ್ಷೀಯ ಮಾತುಕತೆ ಬಗ್ಗೆ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ವೇಳೆ ಝಾಕಿರ್ ನಾಯ್ಕ್ ವಿಷಯ ಪ್ರಸ್ತಾಪಿಸಿದ್ದಾರೆ.  ಉಭಯ ರಾಷ್ಟ್ರಗಳ ಅಧಿಕಾರಿಗಳೂ ಈ ನಿಟ್ಟಿನಲ್ಲಿ ಸಂಪರ್ಕದಲ್ಲಿರಲು ತೀರ್ಮಾನಿಸಲಾಯಿತು ಎಂದು ಹೇಳಿದ್ದಾರೆ. 

ಈ ಹಿಂದೆಯೂ ಝಾಕಿರ್ ನಾಯ್ಕ್ ಗಡಿಪಾರಿಗೆ ಮಲೇಷ್ಯಾಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. 

ಮಲೇಷ್ಯಾ ಪ್ರಧಾನಿ-ಮೋದಿ ಭಯೋತ್ಪಾದನೆಯ ಬಗ್ಗೆಯೂ ಚರ್ಚೆ ನಡೆಸಿದ್ದು, ಭಯೋತ್ಪಾದನೆ ಜಾಗತಿಕ ಸಮಸ್ಯೆ, ಮಲೇಷ್ಯಾ ಯಾವುದೇ ರೀತಿಯ ಭಯೋತ್ಪಾದನೆಯ ವಿರುದ್ಧವಾಗಿರುವುದನ್ನು ಮಲೇಷ್ಯಾ ಪ್ರಧಾನಿ ಮಹತಿರ್ ಸ್ಪಷ್ಟಪಡಿಸಿದ್ದಾರೆಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com