ಭಾರತದ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ

ಬಾಹ್ಯಾಕಾಶಕ್ಕೆ ಭಾರತದ ಗಗನಯಾನಿಗಳನ್ನು ರವಾನಿಸುವ ಪ್ರಧಾನಿ ನರೇಂದ್ ಮೋದಿ ಅವರ ಕನಸಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನೆರವಿನ ಹಸ್ತ ಚಾಚಿದ್ದು, ಭಾರತೀಯ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Published: 05th September 2019 10:32 AM  |   Last Updated: 05th September 2019 10:32 AM   |  A+A-


Russia to train Indian astronauts

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ-ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಿಂದ ಮಹತ್ವದ ಒಪ್ಪಂದಕ್ಕೆ ಸಹಿ

ಮಾಸ್ಕೋ: ಬಾಹ್ಯಾಕಾಶಕ್ಕೆ ಭಾರತದ ಗಗನಯಾನಿಗಳನ್ನು ರವಾನಿಸುವ ಪ್ರಧಾನಿ ನರೇಂದ್ ಮೋದಿ ಅವರ ಕನಸಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನೆರವಿನ ಹಸ್ತ ಚಾಚಿದ್ದು, ಭಾರತೀಯ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹೌದು.. ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನದಲ್ಲಿ ಬಾಹ್ಯಾಕಾಶಕ್ಕೆ ತೆರಳಲಿರುವ ಯಾತ್ರಿಗಳಿಗೆ ರಷ್ಯಾ ತರಬೇತಿ ನೀಡಲಿದೆ. ಈ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹತ್ವದ ಒಪ್ಪಂದಕ್ಕೂ ಸಹಿಹಾಕಿದ್ದಾರೆ. 

ಈ ಕುರಿತಂತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 2022ರಲ್ಲಿ ಹಮ್ಮಿಕೊಳ್ಳಲಾಗಿರುವ ಈ ಗಗನಯಾತ್ರೆಯಲ್ಲಿ ಮೂವರು ಭಾರತೀಯರು ಪಾಲ್ಗೊಳ್ಳಲಿದ್ದು, ಗಗನಯಾನಿಗಳನ್ನು ಸೇನೆಯಿಂದ ಆಯ್ಕೆ ಮಾಡಲಾಗುತ್ತದೆ. ರಕ್ಷಣಾ ತಂತ್ರಜ್ಞಾನ ವರ್ಗಾವಣೆ ಕೋರಿಕೆ ಬಗ್ಗೆ ಅಧ್ಯಕ್ಷ ಪುಟಿನ್ ಉತ್ಸುಕರಾಗಿದ್ದಾರೆ. ಇದರಿಂದ ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಸೇನಾ ಸಾಧನಾ- ಸಲಕರಣೆಗಳನ್ನು ತಯಾರಿಸಿ ತೃತೀಯ ಜಗತ್ತಿನ ರಾಷ್ಟಗಳಿಗೆ ಮಾರಾಟ ಮಾಡಬಹುದು ಎಂದು ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ವ್ಲಾದಿವೊಸ್ಟಾಕ್ ನ ಜ್ವೆಜ್ಡಾ ಶಿಪ್ ಬಿಲ್ಡಿಂಗ್ ಕಾಂಪ್ಲೆಕ್ಸ್​ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಪುಟಿನ್ ಮುಂದಿನ ವರ್ಷ ಮೇ ತಿಂಗಳಲ್ಲಿ ಮಾಸ್ಕೊದಲ್ಲಿ ನಡೆಯಲಿರುವ ಎರಡನೇ ವಿಶ್ವ ಯುದ್ಧದ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು.

ಗೌರವಕ್ಕೆ ಧನ್ಯವಾದ ಹೇಳಿದ ಮೋದಿ
ರಷ್ಯಾದ ಅತ್ತುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಆಂಡ್ರ್ಯೂ ಅಪೊಸ್ತಲ್’ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ ಪುತಿನ್ ಪ್ರದಾನ ಮಾಡಿದರು. ಉಭಯ ದೇಶಗಳ ಸಹಕಾರ ವೃದ್ಧಿಗೆ ಮೋದಿ ತೋರಿದ ಆಸಕ್ತಿಗಾಗಿ ಈ ಪ್ರಶಸ್ತಿಯನ್ನು ಕಳೆದ ಏಪ್ರಿಲ್​ನಲ್ಲೇ ಘೋಷಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ, ‘ಈ ಪುರಸ್ಕಾರಕ್ಕೆ ನನ್ನನ್ನು ಪರಿಗಣಿಸಿದ ಮಿತ್ರ ಪುತಿನ್​ಗೆ ಧನ್ಯವಾದ’ ಎಂದು ಮೋದಿ, ‘ಈ ಪ್ರಶಸ್ತಿಯು ಭಾರತದ 130 ಕೋಟಿ ಜನರಿಗೆ ಸಂದ ಗೌರವ’ ಎಂದರು.

Stay up to date on all the latest ಅಂತಾರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp