ಪತ್ರಕರ್ತ ರವೀಶ್ ಕುಮಾರ್ ಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಧಾನ

ಬಾರತೀಯ ಮಾದ್ಯಮಲೋಕ ಬಿಕ್ಕಟ್ಟಿನ ಸ್ಥಿತಿಯನ್ನು ಎದುರಿಸುತ್ತಿದೆ. ಇದು ಆಕಸ್ಮಿಕವಲ್ಲ. ಆದರೆ ವ್ಯವಸ್ಥಿತ ಮತ್ತು ರಚನಾತ್ಮಕವಾಗಿದೆ ಎಂದು ಭಾರತದ ಪ್ರಮುಖ ಪತ್ರಕರ್ತ ರವೀಶ್ ಕುಮಾರ್ ಹೇಳಿದ್ದಾರೆ. ಏಷ್ಯಾದ ನೋಬೆಲ್ ಎಂದು ಖ್ಯಾತವಾಗಿರುವ ರಾಮೋನ್ ಮ್ಯಾಗ್ಸೆಸೆ 2019 ಸ್ವೀಕರಿಸಿ ಅವರು ಮಾತನಾಡಿದರು.
 

Published: 09th September 2019 04:35 PM  |   Last Updated: 09th September 2019 04:36 PM   |  A+A-


ಪತ್ರಕರ್ತ ರವೀಶ್ ಕುಮಾರ್ ಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಧಾನ

Posted By : Raghavendra Adiga
Source : Online Desk

ಮನೀಲಾ: ಬಾರತೀಯ ಮಾದ್ಯಮಲೋಕ ಬಿಕ್ಕಟ್ಟಿನ ಸ್ಥಿತಿಯನ್ನು ಎದುರಿಸುತ್ತಿದೆ. ಇದು ಆಕಸ್ಮಿಕವಲ್ಲ. ಆದರೆ ವ್ಯವಸ್ಥಿತ ಮತ್ತು ರಚನಾತ್ಮಕವಾಗಿದೆ ಎಂದು ಭಾರತದ ಪ್ರಮುಖ ಪತ್ರಕರ್ತ ರವೀಶ್ ಕುಮಾರ್ ಹೇಳಿದ್ದಾರೆ. ಏಷ್ಯಾದ ನೋಬೆಲ್ ಎಂದು ಖ್ಯಾತವಾಗಿರುವ ರಾಮೋನ್ ಮ್ಯಾಗ್ಸೆಸೆ 2019 ಸ್ವೀಕರಿಸಿ ಅವರು ಮಾತನಾಡಿದರು.

ಎನ್ ಡಿಟಿವಿ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಶ್ ನಿರ್ಭೀತ ಪತ್ರಕರ್ತ, ಧ್ವನಿಯಿಲ್ಲದವರ ಧ್ವನಿಯಾದ ಪತ್ರಕರ್ತ ಎಂದು ಗುರುತಿಸಿಕೊಂಡಿದ್ದಾರೆ. 

"ಭಾರತೀಯ ಮಾಧ್ಯಮವು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಮತ್ತು ಈ ಬಿಕ್ಕಟ್ಟು ಆಕಸ್ಮಿಕವೇನಲ್ಲ, ಆದರೆ ವ್ಯವಸ್ಥಿತ ಮತ್ತು ರಚನಾತ್ಮಕವಾಗಿದೆ. ಪತ್ರಕರ್ತರಾಗಿರುವುದು ಒಂಟಿತನದ ಪ್ರಯತ್ನವಾಗಿ ಮಾರ್ಪಟ್ಟಿದೆ.”ಎಂದು ಕುಮಾರ್ ಫಿಲಿಪೈನ್ಸ್ ರಾಜಧಾನಿಯಲ್ಲಿ  ಹೇಳಿದ್ದಾರೆ.ಮಾಧ್ಯಮದಲ್ಲಿನ ಬಿಕ್ಕಟ್ಟನ್ನು ಮೌಲ್ಯಮಾಪನ ಮಾಡುವುದು ಹೆಚ್ಚು ಮುಖ್ಯವಾಗಿದೆ ಅವರು ಅಭಿಪ್ರಾಯಪಟ್ಟರು.

ಏಷ್ಯಾದ ಪ್ರಮುಖ ಪ್ರಶಸ್ತಿ ಹಾಗೂ  ಅತ್ಯುನ್ನತ ಗೌರವವಾಗಿರುವ ಮ್ಯಾಗ್ಸೆಸೆ ಪುರಸ್ಕಾರವನ್ನು ರವೀಶ್ ಒಳಗೊಂಡಂತೆ ಈ ಬಾರಿ ಐದು ಸಾಧಕರಿಗೆ ನೀಡಲಾಗಿದೆ. ಉಳಿದ ನಾಲ್ವರೆಂದರೆ ಮ್ಯಾನ್ಮಾರ್‌ನ ಕೋ ಸ್ವೀ ವಿನ್, ಥೈಲ್ಯಾಂಡ್‌ನ ಅಂಕಾನಾ ನೀಲಾಪೈಜಿತ್, ಫಿಲಿಪೈನ್ಸ್‌ನ ರೇಮುಂಡೋ ಪೂಜಂಟೆ ಕಯಾಬ್ಯಾಬ್ ಮತ್ತು ದಕ್ಷಿಣ ಕೊರಿಯಾದ ಕಿಮ್ ಜೊಂಗ್-ಕಿ.

ಬಿಹಾರದ ಜಿತ್ವಾರ್ಪುರ ಗ್ರಾಮದಲ್ಲಿ ಜನಿಸಿದ ಕುಮಾರ್ 1996 ರಲ್ಲಿ ನವದೆಹಲಿ ಟೆಲಿವಿಷನ್ ನೆಟ್ವರ್ಕ್ (ಎನ್‌ಡಿಟಿವಿ ) ಗೆ ಸೇರಿಕೊಂಡರು ಮತ್ತುಫೀಲ್ಡ್ ರಿಪೋರ್ಟರ್ ಆಗಿ ಸೇವೆ ಸಲ್ಲಿಸಿದ್ದರು.ದೇಶದ 422 ಮಿಲಿಯನ್ ಹಿಂದಿ ಭಾಷಿಕರನ್ನು ಗುರಿಯಾಗಿಸಿಕೊಂಡು ಎನ್‌ಡಿಟಿವಿ ತನ್ನ 24 ಗಂಟೆಗಳ ಹಿಂದಿ ಭಾಷೆಯ ಸುದ್ದಿ ಚಾನೆಲ್ - ಎನ್‌ಡಿಟಿವಿ ಇಂಡಿಯಾವನ್ನು ಪ್ರಾರಂಭಿಸಿದ ನಂತರ, ಅವರಿಗೆ ತಮ್ಮದೇ ಆದ ದೈನಂದಿನ ಕಾರ್ಯಕ್ರಮ ‘ಪ್ರೈಮ್ ಟೈಮ್’ ನಡೆಸಿಕೊಡುವ ಜವಾಬ್ದಾರಿ ನೀಡಲಾಗಿದೆ.
 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp