ಕಾಶ್ಮೀರದ ಬಗ್ಗೆ ಮಾತನಾಡುವ ಹಕ್ಕು ಇಸ್ಲಾಮಾಬಾದ್ ಗೆ ಇಲ್ಲ: ಪಾಕ್ ಗೆ ಭಾರತದ ದಿಟ್ಟ ಉತ್ತರ

ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಂಡಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಭಾರತ ದಿಟ್ಟ ಉತ್ತರ ನೀಡಿದ್ದು, ಇಸ್ಲಾಮಾಬಾದ್....
ಕಾಶ್ಮೀರ
ಕಾಶ್ಮೀರ

ಜಿನೀವಾ: ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಂಡಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಭಾರತ ದಿಟ್ಟ ಉತ್ತರ ನೀಡಿದ್ದು, ಇಸ್ಲಾಮಾಬಾದ್ ವಾಸ್ತವದಲ್ಲಿ ದುಷ್ಕೃರ್ತ್ಯಗಳ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿಕೊಂಡು, ಬಲಿಪಶುವಿನಂತೆ ಅಳುತ್ತಿದೆ ಎಂದು ತೀರುಗೇಟು ನೀಡಿದೆ.

ಪರಿಷತ್ತಿನಲ್ಲಿ ಮಾನವ ಹಕ್ಕುಗಳನ್ನು ರೂಪಿಸುವ ರಚನಾತ್ಮಕ ವಿಧಾನವನ್ನು ಭಾರತ ದೃಢವಾಗಿ ನಂಬುತ್ತದೆ. ಜಾಗತಿಕವಾಗಿ ಜನರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ನಾವು ಪ್ರಾಯೋಗಿಕ ಕ್ರಮಗಳನ್ನು ಕಂಡುಹಿಡಿಯಬೇಕಾಗಿದೆ. ಇತರ ದೇಶಗಳಲ್ಲಿ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ಮಾತನಾಡುವವರು, ತಾವೇ ಹಕ್ಕನ್ನು ಉಲ್ಲಂಘಿಸುತ್ತಿದ್ದಾರೆ. ನಿಜವಾಗಿಯೂ ತಪ್ಪಿತಸ್ಥರಾಗಿದ್ದರೂ, ಬಲಿಪಶುಗಳಂತೆ ಅಳುತ್ತಾರೆ ಎಂದು ಎಂಇಎ ಪೂರ್ವ ವಲಯದ ಕಾರ್ಯದರ್ಶಿ ವಿಜಯ್ ಠಾಕೂರ್ ಸಿಂಗ್ ಯುಎನ್‌ಹೆಚ್‌ಆರ್‌ಸಿ ಸಭೆಯಲ್ಲಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯ. ಕಾಶ್ಮೀರದ ಬಗ್ಗೆ ಮಾತನಾಡುವ ಹಕ್ಕು ಇಸ್ಲಾಮಾಬಾದ್ ಗೆ ಇಲ್ಲ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತದ ವಿರುದ್ಧ ಪಾಕಿಸ್ತಾನ ಉತ್ಪ್ರೇಕ್ಷೆಯ ಮತ್ತು ದುರುದ್ದೇಶದ ಆರೋಪ ಮಾಡುತ್ತಿದ್ದು, ಪಾಕಿಸ್ತಾನದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಆಂತರಿಕ ತನಿಖೆ ನಡೆಸಬೇಕು ಎಂಬ ಪಾಕಿಸ್ತಾನದ ಬೇಡಿಕೆಯನ್ನು ಕಡೆಗಣಿಸುವಂತೆ ಭಾರತ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ಮನವಿ ಮಾಡಿದೆ.

370ನೇ ವಿಧಿ ರದ್ದು ಭಾರತದ ಸಾರ್ವಭೌಮ ನಿರ್ಧರವಾಗಿದ್ದು, ಇದು ಸಂಪೂರ್ಣ ಆಂತರಿಕ ವಿಚಾರ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ. ಯಾವುದೇ ದೇಶವು ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಸ್ವೀಕರಿಸಲು ಸಾಧ್ಯವಿಲ್ಲ, ಭಾರತ ಕೂಡ ಹಾಗೆಯೇ ,ಎಂಬುದನ್ನು ಈ ಸಂದರ್ಭದಲ್ಲಿ ದೇಶದ ಪ್ರತಿನಿಧಿ ಸ್ಪಷ್ಟಪಡಿಸಿದರು.

ಮಾನವ ಹಕ್ಕುಗಳ ಹೆಸರಿನಡಿಯಲ್ಲಿ ದುರುದ್ದೇಶಪೂರಿತ ರಾಜಕೀಯ ಕೆಲಸಗಳಿಗಾಗಿ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರನ್ನು ನಾವು ಬಹಿಷ್ಕರಿಸಬೇಕು ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ಬಳಿಕ, ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ದೂರು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com