ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಗ್ನ ಸ್ಥಿತಿ ಈಗ ಸ್ವಲ್ಪ ಕಡಿಮೆಯಾಗಿದೆ: ಡೊನಾಲ್ಡ್ ಟ್ರಂಪ್ 

ಎರಡು ವಾರ ಹಿಂದಿಗಿಂತ ಈಗ ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ  ಕಡಿಮೆಯಾಗಿದ್ದು, ಈ ಎರಡು ದಕ್ಷಿಣ ಏಷ್ಯಾ ನೆರೆ ರಾಷ್ಟ್ರಗಳು ಬಯಸಿದರೆ ಸಹಾಯ ಮಾಡಲು ಸಿದ್ದ ಎಂದು ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. 
ಫ್ರಾನ್ಸ್ ನಲ್ಲಿ ಕಳೆದ ತಿಂಗಳು ನಡೆದ ಜಿ7 ಶೃಂಗಸಭೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಫ್ರಾನ್ಸ್ ನಲ್ಲಿ ಕಳೆದ ತಿಂಗಳು ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಎರಡು ವಾರ ಹಿಂದಿಗಿಂತ ಈಗ ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ  ಕಡಿಮೆಯಾಗಿದ್ದು, ಈ ಎರಡು ದಕ್ಷಿಣ ಏಷ್ಯಾ ನೆರೆ ರಾಷ್ಟ್ರಗಳು ಬಯಸಿದರೆ ಸಹಾಯ ಮಾಡಲು ಸಿದ್ದ ಎಂದು ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.


ಕಳೆದ ತಿಂಗಳು ಆಗಸ್ಟ್ 26ರಂದು ಫ್ರಾನ್ಸ್ ನಲ್ಲಿ ನಡೆದ ಜಿ7 ಶೃಂಗಸಭೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಂತರ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡುತ್ತಿದ್ದಾರೆ.


ಎಲ್ಲರಿಗೂ ಗೊತ್ತಿರುವಂತೆ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮುಖ್ಯವಾಗಿರುವುದು ಕಾಶ್ಮೀರ ಸಂಘರ್ಷ. ಈಗ ಅಲ್ಲಿನ ಸಂಘರ್ಷದ ಉದ್ವಿಗ್ನತೆ ಎರಡು ವಾರದ ಹಿಂದಿಗಿಂತ ಕಡಿಮೆಯಾಗಿದೆ ಎಂದು ನಿನ್ನೆ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.


ನಾನು ಎರಡೂ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರು ಬಯಸಿದರೆ ಎರಡೂ ರಾಷ್ಟ್ರಗಳಿಗೆ ಸಹಾಯ ಮಾಡಲಿಚ್ಛಿಸುತ್ತೇನೆ. ಅದು ಅವರಿಗೂ ಗೊತ್ತಿದೆ ಎಂದರು.


ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.


ಕಳೆದ ಜುಲೈಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್  ಅಮೆರಿಕಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕಾಶ್ಮೀರ ವಿವಾದದಲ್ಲಿ ನಿಮ್ಮ ಮತ್ತು ಭಾರತದ ಮಧ್ಯೆ ಸಂಧಾನಕಾರನಾಗಿ ಮಧ್ಯಸ್ಥಿಕೆ ವಹಿಸಲು ಸಿದ್ದ, ಭಾರತ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಬಳಿ ಕೇಳಿಕೊಂಡಿದ್ದರು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.


ಆದರೆ ಭಾರತ ನಯವಾಗಿಯೇ ಅಮೆರಿಕಾ ಪ್ರಸ್ತಾವನೆಯನ್ನು ತಿರಸ್ಕರಿಸಿ ಕಾಶ್ಮೀರ ವಿವಾದ ನಮ್ಮ ಮತ್ತು ಪಾಕಿಸ್ತಾನ ಮಧ್ಯೆ ಇರುವಂತದ್ದು. ಅದರಲ್ಲಿ ಇನ್ನೊಂದು ದೇಶ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com