ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪನ; ರಿಕ್ಚರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲು

ದ್ವೀಪರಾಷ್ಟ್ರ ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ರಿಕ್ಚರ್ ಮಾಪಕದಲ್ಲಿ ಬರೊಬ್ಬರಿ 5.8ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮನಿಲಾ: ದ್ವೀಪರಾಷ್ಟ್ರ ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ರಿಕ್ಚರ್ ಮಾಪಕದಲ್ಲಿ ಬರೊಬ್ಬರಿ 5.8ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ  ಪ್ರಕಾರ ಫಿಲಿಪ್ಪೈನ್ಸ್ ನ ಸರಂಗನಿ ಪ್ರಾಂತ್ಯದಲ್ಲಿ ಈ ಭೂಕಂಪನ ಸಂಭವಿಸಿದ್ದು, 3 ವರ್ಷಗಳಿಂದೀಚೆಗೆ ಇಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಇದಾಗಿದೆ ಎಂದು ಅಮೆರಿಕದ ಭೂಕಂಪನ ಮಾಪನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಕಾಲಮಾನ ರಾತ್ರಿ 11.32 ರ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು, ಭೂಕಂಪನ ಸಂಭವಿಸಿರುವ ಸರಂಗನಿ ಪ್ರಾಂತ್ಯ ಭೂಕಂಪನ ಮತ್ತು ಲಾವಾರಸ ಚಟುವಟಿಕೆಯಿಂದ ಕೂಡಿರುವ ರಿಂಗ್ ಫೈರ್ ಪ್ರದೇಶದಲ್ಲಿದೆ. ಭೂಮಿ ಕಂಪಿಸುವುದು ಸಾಮಾನ್ಯವೇ ಆದರೆ ಈ ಬಾರಿ ಕೊಂಚ ಹೆಚ್ಚಿನ ಪ್ರಮಾಣದಲ್ಲೇ ಭೂಮಿ ಕಂಪಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಇದೇ ಫೆಸಿಫಿಕ್ ಸಾಗರದಲ್ಲಿ ಲಾವಾರಸ ಉಕ್ಕಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com