ಭಾರತೀಯ ಐಟಿ ಕಂಪೆನಿ ಮೇಲೆ ತಾರತಮ್ಯ ಆರೋಪ; ಕೋರ್ಟ್ ನಲ್ಲಿ ಮೊಕದ್ದಮೆ 

ನ್ಯಾಯಾಲಯಕ್ಕೆ ಸಲ್ಲಿಸಲಾದ ಮೊಕದ್ದಮೆಯೊಂದರಲ್ಲಿ ಅಮೆರಿಕಾದಲ್ಲಿನ ಭಾರತೀಯ ಡಿಜಿಟಲ್ ಸೇವೆ ಕಂಪೆನಿ ನೇಮಕಾತಿ ಮತ್ತು ಉದ್ಯೋಗದಲ್ಲಿ ದಕ್ಷಿಣ ಏಷ್ಯಾ ನಾಗರಿಕರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದು, ಭಾರತೀಯರಲ್ಲದವರ ಮೇಲೆ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ನ್ಯಾಯಾಲಯಕ್ಕೆ ಸಲ್ಲಿಸಲಾದ ಮೊಕದ್ದಮೆಯೊಂದರಲ್ಲಿ ಅಮೆರಿಕಾದಲ್ಲಿನ ಭಾರತೀಯ ಡಿಜಿಟಲ್ ಸೇವೆ ಕಂಪೆನಿ ನೇಮಕಾತಿ ಮತ್ತು ಉದ್ಯೋಗದಲ್ಲಿ ದಕ್ಷಿಣ ಏಷ್ಯಾ ನಾಗರಿಕರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದು, ಭಾರತೀಯರಲ್ಲದವರ ಮೇಲೆ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಲಾಗಿದೆ.


ಅಮೆರಿಕಾ ಪ್ರಜೆ ಟಮಿ ಸುಲ್ಜ್ ಬರ್ಗ್ ಸಲ್ಲಿಸಿರುವ ಮೊಕದ್ದಮೆಯಲ್ಲಿ, ಸಾನ್ ಜೊಸ್ ಮೂಲದ ಹೆಪ್ಪಿಯಸ್ಟ್ ಮೈಂಡ್ಸ್ ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು ಕಂಪೆನಿಯಲ್ಲಿರುವ ಶೇಕಡಾ 90ರಷ್ಟು ಉದ್ಯೋಗಿಗಳು ದಕ್ಷಿಣ ಏಷ್ಯಾ ಅದರಲ್ಲಿಯೂ ಭಾರತ ಮೂಲದವರಾಗಿದ್ದಾರೆ.


ವಿಶ್ವದಾದ್ಯಂತ ಹೆಪ್ಪಿಯಸ್ಟ್ ಮೈಂಡ್ಸ್ ಕಂಪೆನಿಯಲ್ಲಿ 2 ಸಾವಿರದ 400 ಉದ್ಯೋಗಿಗಳಿದ್ದು ಸುಮಾರು 200 ಮಂದಿ ಅಮೆರಿಕಾದಲ್ಲಿದ್ದಾರೆ. ಕಂಪೆನಿಯಲ್ಲಿ ಭಾರತೀಯರು ಸೇರಿದಂತೆ ದಕ್ಷಿಣ ಏಷ್ಯಾದವರನ್ನು ಹೆಚ್ಚಾಗಿ ನೇಮಕಾತಿ ಮಾಡಲಾಗುತ್ತಿದೆ, ಈ ಆದ್ಯತೆ ಮೂರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಹೆಚ್-1ಬಿ ವೀಸಾವನ್ನು ಪಡೆಯುವ ಅಭ್ಯಾಸದಲ್ಲಿ ಕಂಪೆನಿ ಸಾಗರೋತ್ತರದಲ್ಲಿ ಇರುವ ದಕ್ಷಿಣ ಏಷ್ಯಾ ಮತ್ತು ಭಾರತೀಯ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತಿದ್ದು ಅಮೆರಿಕಾದಲ್ಲಿ ನೇಮಕಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.


ದಕ್ಷಿಣ ಏಷ್ಯಾದವರಿಗೆ ಮತ್ತು ಭಾರತೀಯ ವೀಸಾ ಹೊಂದಿರುವವರಿಗೆ ಕಂಪೆನಿಯಲ್ಲಿ ಈಗಿರುವ ಬೇರೆ ದೇಶಗಳ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ ಇವರಿಗೆ ಪ್ರಾಧ್ಯಾನ್ಯತೆ ನೀಡಲಾಗುತ್ತಿದೆ. ಕಂಪೆನಿಯಲ್ಲಿ ತಾವಿದ್ದ ಬ್ಯುಸ್ ನೆಸ್ ಡೆವೆಲಪ್ ಮೆಂಟ್ ನಿರ್ದೇಶಕಿ ಹುದ್ದೆಗೆ ಎಲ್ -1 ವೀಸಾ ಹೊಂದಿದ್ದ ಭಾರತದಿಂದ ಅಮೆರಿಕಾಕ್ಕೆ ಕೆಲಸ ವೀಸಾದಡಿ ಬಂದ ಸುಲ್ಜ್ ಬರ್ಗ್ ಅವರನ್ನು ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.


ಹೆಪ್ಪಿಯಸ್ಟ್ ಮೈಂಡ್ಸ್ ಕಂಪೆನಿಗೆ ನೇಮಕಾತಿ ಮತ್ತು ಇತರ ಉದ್ಯೋಗ ಸಂಬಂಧಿ ನಿರ್ಧಾರಗಳಲ್ಲಿ ತಾರತಮ್ಯರಹಿತ ಕ್ರಮಗಳನ್ನು ಅನುಸರಿಸುವಂತೆ ಆದೇಶ ನೀಡಬೇಕೆಂದು ಮೊಕದ್ದಮೆಯಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ ತಮಗೆ ಉಂಟಾದ ನಷ್ಟವನ್ನು ಕಂಪೆನಿ ಭರಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com