ಕಾಶ್ಮೀರಿಗಳಿಗೆ ಬೆಂಬಲ ನೀಡಲು ಕಾಶ್ಮೀರದಲ್ಲಿ ಸೆ.13ರಂದು ಬೃಹತ್ ಸಮಾವೇಶ: ಪಾಕ್ ಪ್ರಧಾನಿ

ಕಾಶ್ಮೀರಿಗಳಿಗೆ ನೈತಿಕ ಬೆಂಬಲ ನೀಡಲು ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್‌ನಲ್ಲಿ ಶುಕ್ರವಾರ ಬೃಹತ್ ಸಾರ್ವಜನಿಕ ಸಮಾವೇಶ ನಡೆಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Published: 11th September 2019 11:47 PM  |   Last Updated: 11th September 2019 11:47 PM   |  A+A-


Imran Khan

ಇಮ್ರಾನ್ ಖಾನ್

Posted By : Lingaraj Badiger
Source : UNI

ಇಸ್ಲಾಮಾಬಾದ್: ಕಾಶ್ಮೀರಿಗಳಿಗೆ ನೈತಿಕ ಬೆಂಬಲ ನೀಡಲು ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್‌ನಲ್ಲಿ ಶುಕ್ರವಾರ ಬೃಹತ್ ಸಾರ್ವಜನಿಕ ಸಮಾವೇಶ ನಡೆಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, “ಸೆಪ್ಟೆಂಬರ್ 13ರಂದು ಪಾಕಿಸ್ತಾನ ಆಡಳಿತವಿರುವ ಕಾಶ್ಮೀರದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು” ಎಂದು ಪ್ರಕಟಿಸಿದ್ದಾರೆ.

ಒಗ್ಗಟ್ಟಿನ ಈ ಸಮಾವೇಶವು ಭಾರತದ ಕಾಶ್ಮೀರದಲ್ಲಿ ಮುಂದುವರೆಸುತ್ತಿರುವ 'ಮುತ್ತಿಗೆ' ಬಗ್ಗೆ ಜಗತ್ತಿಗೆ ಸಂದೇಶ ರವಾನಿಸುತ್ತದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿವೇಶನದಲ್ಲಿ ಭಾರತದ ವಿರುದ್ಧ ಪಾಕ್ ಅಭಿಯಾನ ನಡೆಸಿದ ಒಂದು ದಿನದ ನಂತರ ಪಾಕ್ ಪ್ರಧಾನಿ ಈ ನಿರ್ಧಾರ ಪ್ರಕಟಿಸಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp