ಪಾಕ್ ತಾಲಿಬಾನ್ ಮುಖ್ಯಸ್ಥ, ಇತರೆ 11 ಉಗ್ರರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದ ಅಮೆರಿಕ

ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಮುಖ್ಯಸ್ಥ ನೂರ್ ವಾಲಿ ಮೆಹ್ಸುದ್ ಸೇರಿದಂತೆ 12 ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ ಮತ್ತು ಹಲವು ಉಗ್ರರಿಗೆ ಹಾಗೂ ಅವರ ಬೆಂಬಲಿಗರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಮುಖ್ಯಸ್ಥ ನೂರ್ ವಾಲಿ ಮೆಹ್ಸುದ್ ಸೇರಿದಂತೆ 12 ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ ಮತ್ತು ಹಲವು ಉಗ್ರರಿಗೆ ಹಾಗೂ ಅವರ ಬೆಂಬಲಿಗರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

 9/11 ಭಯೋತ್ಪದಾಕ ದಾಳಿಯ ವಾರ್ಷಿಕೋತ್ಸವ ಮುನ್ನಾದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದು, ಹಿಜ್ಬುಲ್ಲಾ, ಹಮಾಸ್, ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್, ಐಸಿಸ್, ಐಸಿಸ್-ಫಿಲಿಪೈನ್ಸ್, ಐಸಿಸ್-ಪಶ್ಚಿಮ ಆಫ್ರಿಕಾ, ಮತ್ತು ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ ಸೇರಿದಂತೆ ಹಲವು ಉಗ್ರ ಸಂಘಟನೆಯ ಉಗ್ರರನ್ನು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.

ಗಗನಚುಂಬಿ ನಗರಿ ನ್ಯೂಯಾರ್ಕ್ ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯುಟಿಸಿ) ಮೇಲೆ ನಡೆದ ಭೀಕರ ಭಯೋತ್ಪಾದನೆ ದಾಳಿಗೆ ಇಂದು 18 ವರ್ಷ. ಅಲ್ ಖೈದಾ ಉಗ್ರರು ನಡೆಸಿದ ಈ ದಾಳಿಯಲ್ಲಿ 3,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com