ಪಾಕ್ ಉಗ್ರರು ಅಮೆರಿಕಾದ ಆರ್ಥಿಕ ನೆರವು ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಸತ್ಯ ಒಪ್ಪಿಕೊಂಡ ಇಮ್ರಾನ್ ಖಾನ್

ಪಾಕಿಸ್ತಾನದ ಉಗ್ರರು ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ಆರ್ಥಿಕ ನೆರವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಯೋತ್ಪಾದಕರನ್ನು ಹುಟ್ಟುಹಾಕುತ್ತಿರುವ ಪಾಕಿಸ್ತಾನ ಕೊನೆಗೂ ತನ್ನ ಸತ್ಯವನ್ನು ಒಪ್ಪಿಕೊಂಡಿದೆ. 
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಉಗ್ರರು ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ಆರ್ಥಿಕ ನೆರವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಯೋತ್ಪಾದಕರನ್ನು ಹುಟ್ಟುಹಾಕುತ್ತಿರುವ ಪಾಕಿಸ್ತಾನ ಕೊನೆಗೂ ತನ್ನ ಸತ್ಯವನ್ನು ಒಪ್ಪಿಕೊಂಡಿದೆ. 

1980ರ ದಶಕದಲ್ಲಿ ಸೋವಿಯತ್ ಒಕ್ಕೂಟದ ಯೋಧರು ಆಫ್ಘಾನಿಸ್ತಾನವನ್ನು ಅತಿಕ್ರಿಸಿದ್ದರು. ಅವರ ವಿರುದ್ಧ ಜಿಹಾದ್'ಗಾಗಿ ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ಆರ್ಥಿಕ ನೆರವ(ಸಿಐಎ)ನ್ನು ಬಳಸಿಕೊಂಡಿದ್ದ ಪಾಕಿಸ್ತಾನ ಮುಜಾಹಿದ್ದೀನ್ ಗಳಿಗೆ ತರಬೇತಿ ನೀಡಿ, ಸಜ್ಜುಗೊಳಿಸಿತ್ತು. ಇದೀಗ ಅವರಿಗೆ ಅಮೆರಿಕಾದ ಭಯೋತ್ಪಾದಕರು ಎಂಬ ಹಣೆಪಟ್ಟಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. 

1 ದಶಕದ ಬಳಿಕ ಅಮೆರಿಕನ್ನರು ಆಫ್ಘಾನಿಸ್ಥಾನಕ್ಕೆ ಬಂದಿದ್ದಾರೆ. ಹೀಗಾಗಿ ಆಫ್ಘಾನಿಸ್ತಾದಲ್ಲಿರುವ ಅಮೆರಿಕಾದವರು ಅದು ಜಿಹಾದ್ ಅಲ್ಲ, ಅದೀ ಭಯೋತ್ಪಾದನೆ ಎಂದು ಪಾಕಿಸ್ತಾನದಲ್ಲಿರುವವರು ಎಂದು ಹೇಳುವಂತಾಗಿದೆ. 

ಆಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನ ಇದೂವರೆಗೂ 70 ಸಾವಿರ ಜನ್ನು ಹಾಗೂ 100 ಶತಕೋಟಿ ಡಾಲರ್ ಆರ್ಥಿಕತೆಯನ್ನು ಕಳೆದುಕೊಂಡಿತ್ತು. ಕೊನೆಯಲ್ಲಿ ಆಫ್ಘಾನಿಸ್ಥಾನದಲ್ಲಿನ ವೈಫಲ್ಯಕ್ಕೆ ಪಾಕಿಸ್ಥಾನದ ಮೇಲೆ ಗೂಬೆ ಕೂರಿಸಲಾಯಿತು. ಇದು ಅನ್ಯಾಯಾದ ಪರಮಾವಧಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಆಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ ತಾಲಿಬಾನ್ ಉಗ್ರ ಸಂಘಟನೆ ಜೊತೆಗೆ ಶಾಂತಿ ಮಾತುಕತೆ ನಡೆಸಲಾಗಿತ್ತು. 9 ಸುತ್ತಿನ ಮಾತುಕತೆ ಬಳಿಕ ತಾಲಿಬಾನ್ ನೊಂದಿಗಿನ ಬಹುತೇಕ ಎಲ್ಲಾ ಭಿನ್ನಾಭಿಪ್ರಾಯಗಳು ಬಗೆಹರಿದಿದ್ದವು. ಈ ಹಂತದಲ್ಲಿ ಟ್ರಂಪ್ ತಾಲಿಬಾನ್ ಜೊತೆಗಿನ ಮಾತುಕತೆಯನ್ನು ರದ್ದುಪಡಿಸಿದ್ದು, ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಅಮೆರಿಕಾದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com