ಪಿಒಕೆಯಲ್ಲಿ ಇಮ್ರಾನ್‌ಗೆ ತೀವ್ರ ಮುಖಭಂಗ: 'ಗೋ ಬ್ಯಾಕ್' ಘೋಷಣೆ ಕೇಳಿ ಪಾಕ್ ಪಿಎಂ ಕಂಗಾಲು!

ಕಾಶ್ಮೀರಿಗರಿಗೆ ಬೆಂಬಲ ಸೂಚಿಸುವ ಸಲುವಾಗಿ ಪಾಕ್ ಆಕ್ರಮಿತ ಕಾಶ್ಮೀರ ರಾಜಧಾನಿ ಮುಜಾಫರ್ ಬಾದ್  ನಲ್ಲಿ ಬೃಹತ್ ಯಾರ್ಲಿಯನ್ನು ನಡೆಸಲಾಗಿತ್ತು. ಈ ರ್ಯಾಲಿ ವೇಳೆ ಗೋ ಬ್ಯಾಕ್ ಇಮ್ರಾನ್ ಖಾನ್ ಘೋಷಣೆಗಳು ಕೇಳಿಬಂದಿದ್ದು ಇದರಿಂದ ಪಾಕ್ ಪ್ರಧಾನಿ ಕಂಗಾಲಾಗಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಕಾಶ್ಮೀರಿಗರಿಗೆ ಬೆಂಬಲ ಸೂಚಿಸುವ ಸಲುವಾಗಿ ಪಾಕ್ ಆಕ್ರಮಿತ ಕಾಶ್ಮೀರ ರಾಜಧಾನಿ ಮುಜಾಫರ್ ಬಾದ್  ನಲ್ಲಿ ಬೃಹತ್ ಯಾರ್ಲಿಯನ್ನು ನಡೆಸಲಾಗಿತ್ತು. ಈ ರ್ಯಾಲಿ ವೇಳೆ ಗೋ ಬ್ಯಾಕ್ ಇಮ್ರಾನ್ ಖಾನ್ ಘೋಷಣೆಗಳು ಕೇಳಿಬಂದಿದ್ದು ಇದರಿಂದ ಪಾಕ್ ಪ್ರಧಾನಿ ಕಂಗಾಲಾಗಿದ್ದಾರೆ.

ರ್ಯಾಲಿ ವೇಳೆ ನೆರೆದಿದ್ದ ಕೆಲ ಮಂದಿ ಗೋ ಬ್ಯಾಕ್ ಇಮ್ರಾನ್ ಖಾನ್ ಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ ಕಾಶ್ಮೀರ ಭಾರತಕ್ಕೆ ಸೇರಲಿದೆ ಎಂದು ಕೂಗಿದ್ದಾರೆ. 

ಇಮ್ರಾನ್ ಖಾನ್ ಕಾಶ್ಮೀರಿಗಳ ಹಕ್ಕುಗಳ ಪರವಾಗಿ ನಾನು ನಿಲ್ಲುತ್ತೇನೆ ಎಂದರು. ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಆಂತರಿಕ ವಿಚಾರ ಎನ್ನುತ್ತಿರುವ ಭಾರತ ವಿರುದ್ಧ ವಾಗ್ದಾಳಿ ನಡೆಸಿದ ಪಾಕ್ ಪ್ರಧಾನಿ, ಈ ವಿಚಾರದಲ್ಲಿ ಭಾರತ ಬೇಜವಾಬ್ದಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಟೀಕಿಸಿದರು.

ವಿಶ್ವಸಂಸ್ಥೆಯ ನಿರ್ಣಯಗಳಂತೆ ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಬೇಕು. ಇಸ್ಲಾಮಿಕ್ ಸಹಕಾರ ಸಂಘಟನೆ ಮತ್ತು ಇತರೆ 58 ರಾಷ್ಟ್ರಗಳು ಪಾಕಿಸ್ತಾನದ ಪರವಾಗಿದ್ದು, ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ ಕರ್ಫ್ಯೂ ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಶ್ಮೀರಿಗಳು ಭಾರತದ ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದರೆ ಉಗ್ರವಾದ ಮತ್ತಷ್ಟು ಹೆಚ್ಚಾಗಲಿದೆ ಎಂದು ನಾನು ಈ ಮೂಲಕ ಎಚ್ಚರಿಸುತ್ತಿದ್ದೇನೆ. ಜನರು ಬೇಸರಗೊಂಡಾಗ, ಅವಮಾನಕ್ಕೆ ಒಳಗಾಗುವುದಕ್ಕಿಂತ ಸಾಯುವುದು ಉತ್ತಮ ಎಂದು ಅವರು ನಿರ್ಧರಿಸುತ್ತಾರೆ ಎಂದು ಪಾಕ್ ಪ್ರಧಾನಿ ಹೇಳಿದರು.

ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಇಮ್ರಾನ್​ ಮಾತನಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com