ಇಮ್ರಾನ್‌ಗೆ ಮತ್ತೆ ಮುಖಭಂಗ: ಪಿಒಕೆಯು ಭಾರತಕ್ಕೆ ಸೇರಿದ್ದು, ಅಲ್ಲಿಂದ ಪಾಕ್ ಕಾಲ್ಕೀಳಬೇಕು: ಬ್ರಿಟನ್ ಸಂಸದ

ಕಾಶ್ಮೀರ ವಿಚಾರವಾಗಿ ಬ್ರಿಟನ್ ಸಂಸತ್ ನಮ್ಮ ಪರವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಬೆನ್ನಲ್ಲೇ ಇಮ್ರಾನ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದ್ದು ಬರೀ ಕಾಶ್ಮೀರವಲ್ಲ, ಪಿಒಕೆನು ಭಾರತಕ್ಕೆ ಸೇರಿದ್ದು ಅಲ್ಲಿಂದ ಪಾಕ್ ಕಾಲ್ಕೀಳಬೇಕು ಎಂದು ಬ್ರಿಟನ್ ಸಂಸದ ತಿಳಿಸಿದ್ದಾರೆ.
ಇಮ್ರಾನ್ ಖಾನ್-ಬಾಬ್ ಬ್ಲಾಕ್ ಮನ್
ಇಮ್ರಾನ್ ಖಾನ್-ಬಾಬ್ ಬ್ಲಾಕ್ ಮನ್

ಲಂಡನ್: ಕಾಶ್ಮೀರ ವಿಚಾರವಾಗಿ ಬ್ರಿಟನ್ ಸಂಸತ್ ನಮ್ಮ ಪರವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಬೆನ್ನಲ್ಲೇ ಇಮ್ರಾನ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದ್ದು ಬರೀ ಕಾಶ್ಮೀರವಲ್ಲ, ಪಿಒಕೆನು ಭಾರತಕ್ಕೆ ಸೇರಿದ್ದು ಅಲ್ಲಿಂದ ಪಾಕ್ ಕಾಲ್ಕೀಳಬೇಕು ಎಂದು ಬ್ರಿಟನ್ ಸಂಸದ ತಿಳಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಪುರ್ ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ರ್ಯಾಲಿ ನಡೆಸಿ ಈ ವೇಳೆ ಬ್ರಿಟನ್ ಸಂಸತ್ ನಲ್ಲಿ ಕಾಶ್ಮೀರ ವಿವಾದದ ಚರ್ಚೆಯಾಗುತ್ತಿದೆ. ನಮಗೆ ಬ್ರಿಟನ್ ಸಂಸತ್ ಬೆಂಬಲವಿದೆ ಎಂದು ಹೇಳಿದ್ದರು. ಆದರೆ ಇದೀಗ ಬ್ರಿಟನ್ ಸಂಸದ ಬಾಬ್ ಬ್ಲಾಕ್ ಮನ್ ಪಿಒಕೆ ಭಾರತಕ್ಕೆ ಸೇರಿದ್ದು ಪಾಕ್ ಅಲ್ಲಿಂದ ವಾಪಸ್ ಹೋಗಬೇಕು ಎಂದು ಹೇಳಿದ್ದಾರೆ.

ಕಾಶ್ಮೀರ ಪಂಡಿತರ ಸಾಂಸ್ಕೃತಿಕ ಸೊಸೈಟಿ ಮತ್ತು ಆಲ್ ಇಂಡಿಯಾ ಕಾಶ್ಮೀರಿ ಸಮಾಜ ಲಂಡನ್ ನಲ್ಲಿ ಕಾಶ್ಮೀರಿ ಪಂಡಿತರ ಹೋರಾಟ ಹಾದಿ ಕುರಿತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಸರ್ ವೇಟಿನ್ ಪಕ್ಷದ ಸಂಸದ ಬಾಬ್ ಬ್ಲಾಕ್ ಮನ್ ಪಾಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದು ಪಡಿಸಿತ್ತು. ಈ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದ್ದರು. ಯಾವುದೇ ಪ್ರಯೋಜನಾಗುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com