ಕಾಶ್ಮೀರದ ಯುವತಿ ಬಗ್ಗೆ ಮಾತನಾಡಲು ಹೋಗಿ ನಗೆಪಾಟಲಿಗೀಡಾದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ! 

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಕಾಶ್ಮೀರದ ಮಕ್ಕಳ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಈಗ ಇದೆ ವಿಷಯವಾಗಿ ಟ್ವಿಟರ್ ನ ತಪರಾಕಿಗೆ ಮಲಾಲ ಗುರಿಯಾಗಿದ್ದಾರೆ. 
ಕಾಶ್ಮೀರದ ಯುವತಿ ಬಗ್ಗೆ ಮಾತನಾಡಲು ಹೋಗಿ ನಗೆಪಾಟಲಿಗೀಡಾದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ!
ಕಾಶ್ಮೀರದ ಯುವತಿ ಬಗ್ಗೆ ಮಾತನಾಡಲು ಹೋಗಿ ನಗೆಪಾಟಲಿಗೀಡಾದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ!

ಇಸ್ಲಾಮಾಬಾದ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಕಾಶ್ಮೀರದ ಮಕ್ಕಳ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಈಗ ಇದೆ ವಿಷಯವಾಗಿ ಟ್ವಿಟರ್ ನ ತಪರಾಕಿಗೆ ಮಲಾಲ ಗುರಿಯಾಗಿದ್ದಾರೆ. 

ಆ.12 ರಂದು ಪರೀಕ್ಷೆಗೆ ತೆರಳಲು ಸಾಧ್ಯವಾಗಲಿಲ್ಲ. ನನ್ನ ಭವಿಷ್ಯದ ಬಗ್ಗೆ ಅಭದ್ರತೆ ಕಾಡುತ್ತಿದೆ. ನಾನು ಬರಹಗಾರ್ತಿಯಾಗಿ, ಸ್ವಾವಲಂಬಿ ಕಾಶ್ಮೀರಿ ಮಹಿಳೆಯಾಗಬೇಕೆಂದು ಬಯಸಿದ್ದೆ, ಈಗ ಉದ್ದೇಶರಹಿತ ಮತ್ತು ಖಿನ್ನತೆಯ ಭಾವನೆ ಕಾಡುತ್ತಿದೆ. ಪರಿಸ್ಥಿತಿ ಇದೇ ರೀತಿ ಇದ್ದರೆ ಸ್ವಾವಲಂಬಿ ಮಹಿಳೇಯಾಗುವುದು ಕಷ್ಟ ಎಂದು ಕಾಶ್ಮೀರದ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆಂದು ಹೇಳಿದ್ದನ್ನು ಮಲಾಲ ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. 

ತಕ್ಷಣವೇ ಜಾಗೃತಗೊಂಡ ಟ್ವಿಟರ್ ಬಳಕೆದಾರರು, ಆ.12 ರಂದು ಈದ್ ಹಬ್ಬ ಇತ್ತು. ಈ ದಿನದಂದು ಭಾರತದಾದ್ಯಂತ ಶಾಲೆಗಳಿಗೆ ರಜೆ ಇತ್ತು. ಆ ದಿನ ರಜೆ ಇರುವ ಸಾಧ್ಯತೆ ಇಮ್ರಾನ್ ಖಾನ್ ವಿವೇಚನೆಯಿಂದ ಮಾತನಾಡುವ ಸಾಧ್ಯತೆ ಇರುವಷ್ಟೇಯೇ ಎಂದು ಟ್ವೀಟಿಗರು ಮಲಾಲ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ಆರ್ಟಿಕಲ್ 370 ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಎಲ್ಲಾ ಶಾಲೆಗಳಿಗೂ ಕಾಶ್ಮೀರದಲ್ಲಿ ರಜೆ ಘೋಷಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com