ಹೌಸ್ಟನ್ ಮೋದಿ ರ‍್ಯಾಲಿಯಲ್ಲಿ ಟ್ರಂಪ್ ಪಾಲ್ಗೊಳ್ಳುವ ಸಾಧ್ಯತೆ 

ಸೆಪ್ಟೆಂಬರ್ 22 ರಂದು ಅಮೆರಿಕಾದ ಹೌಸ್ಟನ್ ನಲ್ಲಿ ಆಯೋಜಿಸಿರುವ  ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತಿಥಿಯಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮೋದಿ, ಟ್ರಂಪ್
ಮೋದಿ, ಟ್ರಂಪ್

ಹೌಸ್ಟನ್: ಸೆಪ್ಟೆಂಬರ್ 22 ರಂದು ಅಮೆರಿಕಾದ ಹೌಸ್ಟನ್ ನಲ್ಲಿ ಆಯೋಜಿಸಿರುವ  ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತಿಥಿಯಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಉಭಯ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರ‍್ಯಾಲಿ ಆಯೋಜಕರು ಈ ವಿಷಯವನ್ನು ಸ್ಪಷ್ಪಪಡಿಸಿದ್ದಾರೆ.

ಕಳೆದ ತಿಂಗಳು ಫ್ರಾನ್ಸ್ ನಲ್ಲಿ ನಡೆದ ಜಿ-20 ಶೃಂಗಸಭೆ ನಂತರ ಮೋದಿ ಹಾಗೂ ಟ್ರಂಪ್ ಸಂಪರ್ಕದಲ್ಲಿದ್ದು, ಟೆಕ್ಸಾಸ್ ನ ಹೌದಿಯಲ್ಲಿ ನಡೆಯಲಿರುವ ಮೋದಿ ರ‍್ಯಾಲಿಯಲ್ಲಿಯೂ ಟ್ರಂಪ್ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೌಸ್ಟನ್ ನಲ್ಲಿ ಉಭಯ ನಾಯಕರು ವ್ಯಾಪಾರ ಒಪ್ಪಂದವೊಂದನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಮೋದಿ ಜೊತೆಯಲ್ಲಿ ಟ್ರಂಪ್ ವೇದಿಕೆ ಹಂಚಿಕೊಳ್ಳುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಆದರೆ, ಈ ರೀತಿಯ ವರದಿಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೋದಿ ರ‍್ಯಾಲಿಯಲ್ಲಿ ಟ್ರಂಪ್ ಪಾಲ್ಗೊಳ್ಳುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೌದಿ ಮೋದಿ ರ‍್ಯಾಲಿ ಮಾಧ್ಯಮ ಸಮನ್ವಯಾಧಿಕಾರಿ ರಿಷಿ ಭೂತಾಡಾ ಹೇಳಿದ್ದಾರೆ.

ಸುಮಾರು 50 ಸಾವಿರ ಭಾರತ- ಅಮೆರಿಕಾದ ಜನರು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಮೆರಿಕಾದ ಇತರ ರಾಜಕೀಯ ಮುಖಂಡರು ಕೂಡಾ ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com