ಶಸ್ತ್ರಾಸ್ತ್ರಗಳನ್ನು ಸಜ್ಜು ಮಾಡಿಕೊಂಡಿದ್ದೇವೆ: ಇರಾನ್ ವಿರುದ್ಧ ಗುಡುಗಿದ ಅಮೆರಿಕಾ

ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಉಗ್ರರು ನಡೆಸಿದ ಡ್ರೋಣ್ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹೊತ್ತುಕೊಂಡಿರುವ ಹಿನ್ನಲೆಯಲ್ಲಿ, ಇರಾನ್ ವಿರುದ್ಧ ಅಮೆರಿಕಾ ಗುಡುಗಿದೆ. 
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಸನ್ನಾ (ಯೆಮನ್): ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಉಗ್ರರು ನಡೆಸಿದ ಡ್ರೋಣ್ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹೊತ್ತುಕೊಂಡಿರುವ ಹಿನ್ನಲೆಯಲ್ಲಿ, ಇರಾನ್ ವಿರುದ್ಧ ಅಮೆರಿಕಾ ಗುಡುಗಿದೆ. 

ದಾಳಿ ಹೊಣೆ ಹೊತ್ತುಕೊಂಡ ಬೆನ್ನಲ್ಲೇ ಹೌತಿ ಬಂಡುಕೋರರು ಸೌದಿ ತೈಲ ಬಾವಿಗಳ ಮೇಲೆ ಮತ್ತಷ್ಟು ದಾಳಿ ನಡೆಸುವ ಬೆದರಿಕೆಯನ್ನೂ ಹಾಕಿವೆ. 

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವೂ ಕೂಡ ಶಸ್ತ್ರಾಸ್ತ್ರಗಳನ್ನು ಸಜ್ಜು ಮಾಡಿಕೊಂಡಿದ್ದೇವೆ ಎಂದು ಗುಡುಗಿದ್ದಾರೆ. ಆದರೆ, ಅಮೆರಿಕಾದ ಈ ಎಚ್ಚರಿಕೆಗೆ ಚೀನಾ ಅಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಕೊಲ್ಲಿ ದೇಶಗಳ ತೀರ ಪ್ರದೇಶವು ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗಲಿರುವ ಭೀತಿ ಎದುರಾಗಿದೆ. 

ಸೌದಿ ಮೇಲೆ ನಡೆದ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಇರಾನ್ ಹೇಳಿಕೊಂಡಿದೆ. ಆದರೆ, ತೈಲ ಘಟಕಗಳ ಮೇಲೆ ದಾಳಿಗೆ ಬಳಕೆಯಾದ ಶಸ್ತ್ರಾಸ್ತ್ರಗಳು ಇರಾನ್ ರಾಷ್ಟ್ರದಿಂದಲೇ ಪೂರೈಕೆಯಾಗವೆ ಎಂದು ಸೌದಿ ಅರೇಬಿಯಾ ನೇತೃತ್ವದ ಸೇನಾ ಪಡೆಗಳು ಆರೋಪಿಸಿವೆ. ಈ ನಡುವೆ ಅಮೆರಿಕಾ ಕೂಡ ದಾಳಿಗೆ ಇರಾನ್'ನ್ನು ದೂಷಿಸಿದೆ. ಯೆಮನ್ ನಿಂದ ದಾಳಿ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ದಾಳಿ ಮಾಡಿದ್ದು ಯಾರೆಂದು ಗೊತ್ತಾದರೆ, ಸೇನಾ ಕಾರ್ಯಾಚರಣೆ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. 

ಸೌದಿ ಅರೇಬಿಯಾ ತೈಲ ಘಟಕದ ಮೇಲೆ ದಾಳಿ ಮಾಡಲಾಗಿದೆ. ನಮಗೆ ತಪ್ಪಿದತಸ್ಥರು ಯಾರೆಂದು ಗೊತ್ತು. ಶಸ್ತ್ರಾಸ್ತ್ರಗಳನ್ನು ನಾವೂ ಸಿದ್ಧವಾಗಿ ಇಟ್ಟುಕೊಂಡಿದ್ದೇವೆ. ಆದರೆ, ಸೌದಿ ಅರೇಬಿಯಾ ಸಾಕ್ಷ್ಯಾಧಾರಗಳನ್ನು ಒದಗಿಸುವುದನ್ನು ಕಾಯುತ್ತಿದ್ದೇವೆಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ತೈಲ ಸಂಪದ್ಬರಿತ ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಆತಂಕ ಸೃಷ್ಟಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com