ಯುದ್ಧೋನ್ಮಾದ ಬಿಟ್ಟು, ತಾಳ್ಮೆಯಿಂದ ಭಾರತದೊಂದಿಗೆ ಮಾತುಕತೆ ನಡೆಸಿ: ಮುಸ್ಲಿಂ ರಾಷ್ಟ್ರಗಳಿಂದ ಪಾಕ್'ಗೆ ತಪರಾಕಿ!

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮಾಡಿದ ಭಾರತದ ನಿರ್ಧಾರವನ್ನು ಜಾಗತಿಕ ವಿಷಯವನ್ನಾಗಿ ಮಾಡಲು ವಿವಿಧ ವೇದಿಕೆಗಳಲ್ಲಿ ಅವಮಾನ ಅನುಭವಿಸಿದ್ದ ಪಾಕಿಸ್ತಾನಕ್ಕೆ ಇದೀಗ ಮುಸ್ಲಿಂ ರಾಷ್ಟ್ರಗಳೂ ಕೂಡ ಪರೋಕ್ಷವಾಗಿ ತಪರಾಕಿ ಹಾಕಿವೆ.

Published: 17th September 2019 08:36 AM  |   Last Updated: 17th September 2019 08:36 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : PTI

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮಾಡಿದ ಭಾರತದ ನಿರ್ಧಾರವನ್ನು ಜಾಗತಿಕ ವಿಷಯವನ್ನಾಗಿ ಮಾಡಲು ವಿವಿಧ ವೇದಿಕೆಗಳಲ್ಲಿ ಅವಮಾನ ಅನುಭವಿಸಿದ್ದ ಪಾಕಿಸ್ತಾನಕ್ಕೆ ಇದೀಗ ಮುಸ್ಲಿಂ ರಾಷ್ಟ್ರಗಳೂ ಕೂಡ ಪರೋಕ್ಷವಾಗಿ ತಪರಾಕಿ ಹಾಕಿವೆ.

ಭಾರತದ ವಿರುದ್ಧ ಯುದ್ಧೋನ್ಮಾದ ಪ್ರದರ್ಶಿಸುವ ಬದಲು ತಾಳ್ಮೆಯಿಂದ ವರ್ತಿಸಿ ಎಂದು ಪ್ರಮುಖ ಮುಸ್ಲಿಂ ರಾಷ್ಟ್ರಗಳ ನಾಯಕರು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್'ಗೆ ಸಲಹೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ. 

ಇದರೊಂದಿಗೆ ಕಾಶ್ಮೀರ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳ ಬೆಂಬಲ ಪಡೆಯಲು ವಿಫಲವಾದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. 

ಸೆ.3ರಂದು ಸೌದಿ ಅರೇಬಿಯಾದ ವಿದೇಶಾಂಗ ಖಾತೆ ರಾಜ್ಯ ಸಚಿವ ಆದಿಲ್ ಅಲ್ ಜುಬೈಲ್, ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಅಲ್ ನಹ್ಯಾನ್ ಪಾಕಿಸ್ತಾನಕ್ಕೆ ಆಗಮಿಸಿದ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಶಾ.ಮೊಹಮ್ಮದ್ ಖುರೇಷಿ, ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಜೊತೆಗೆ ಮಾತುಕತೆ ನಡೆಸಿದ್ದರು. 

ಈ ವೇಳೆ ಭಾರತದೊಂದಿಗೆ ಸಂಘರ್ಷ ನಡೆಸುವುದನ್ನು ಬಿಟ್ಟು ತಾಳ್ಮೆ ಪ್ರದರ್ಶಿಸಬೇಕು. ಸದ್ಯ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭಾರತದ ಜೊತೆ ಹಿಂಬಾಗಿಲ ರಾಜತಾಂತ್ರಿಕ ಮಾತುಕತೆ ನಡೆಸಬೇಕು ಎಂದು ಸಲಹೆ ನೀಡೀದ್ದಾರೆಂದು ವರದಿಗಳು ತಿಳಿಸಿವೆ. 

ಅಲ್ಲದೆ, ತಾವು ಕೇಲವ ಸೌದಿ ಮತ್ತು ಯುಎಇ ಪರವಾಗ ಮಾತ್ರ ಇಲ್ಲಿಗೆ ಆಗಮಿಸಿಲ್ಲ, ಬದಲಾಗಿ ಇತರೆ ಮುಸ್ಲಿಂ ದೇಶಗಳ ಪ್ರತಿನಿಧಿಗಳಾಗಿಯೂ ಆಗಮಿಸಿದ್ದು, ಅವುಗಳ ಅಭಿಪ್ರಾಯವೂ ಇದೇ ಆಗಿದೆ ಎಂದು ಉಭಯ ನಾಯಕರು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆನ್ನಲಾಗಿದೆ. ಹಿಂಬಾಗಿಲ ಮಾತುಕತೆಗೆ ಸೂಕ್ತ ವೇದಿಕೆ ಒದಗಿಸಿಕೊಡಲೂ ತಾವು ಸಿದ್ಧ ಎಂಬ ಸಂದೇಶವನ್ನೂ ಪಾಕಿಸ್ತನಕ್ಕೆ ರವಾಸಿದ್ದಾರೆಂದು ವರದಿಗಳು ತಿಳಿಸಿವೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp