ಪಾಕ್'ನಲ್ಲಿ ಹಿಂದೂ ವಿದ್ಯಾರ್ಥಿನಿ ಹತ್ಯೆ: ಕರಾಚಿಯಲ್ಲಿ ತೀವ್ರಗೊಂಡ ಪ್ರತಿಭಟನೆ

ಹಿಂದೂ ವಿದ್ಯಾರ್ಥಿನಿಯ ಹತ್ಯೆ ಪಾಕಿಸ್ತಾನದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಹತ್ಯೆ ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 
ಪಾಕ್'ನಲ್ಲಿ ಹಿಂದೂ ವಿದ್ಯಾರ್ಥಿನಿ ಹತ್ಯೆ: ಕರಾಚಿಯಲ್ಲಿ ತೀವ್ರಗೊಂಡ ಪ್ರತಿಭಟನೆ
ಪಾಕ್'ನಲ್ಲಿ ಹಿಂದೂ ವಿದ್ಯಾರ್ಥಿನಿ ಹತ್ಯೆ: ಕರಾಚಿಯಲ್ಲಿ ತೀವ್ರಗೊಂಡ ಪ್ರತಿಭಟನೆ

ಇಸ್ಲಾಮಾಬಾದ್: ಹಿಂದೂ ವಿದ್ಯಾರ್ಥಿನಿಯ ಹತ್ಯೆ ಪಾಕಿಸ್ತಾನದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಹತ್ಯೆ ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

ವಿದ್ಯಾರ್ಥಿನಿ ಹತ್ಯೆ ಸಂಬಂಧ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಇದೀಗ ಪ್ರಕರಣ ಸಂಬಂಧ ಕರಾಚಿಯ ಬೀದಿ ಬೀದಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ ಎಂದು ವರದಿಗಳು ತಿಳಿಸಿವೆ. 

ಲರ್ಕಾನ್ ಜಿಲ್ಲೆಯ ನಿವಾಸಿಯಾದ ನಮ್ರತಾ ದಂತ ವೈದ್ಯಕೀಯ ವ್ಯಾಸಾಂಗ ಮಾಡುತ್ತಿದ್ದು, ವಿದ್ಯಾರ್ಥಿನಿಯ ಮೃತದೇಹ ಹಾಸ್ಟೆಲ್ ವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿ ನಮ್ರತಾ ಕೊರಳಿಗೆ ಕೇಬಲ್ ವೈಯರ್ ಸುತ್ತಲಾಗಿದ್ದು, ಆಕೆಯ ಕೈಗಳ ಮೇೆ ಬಲವಾಗಿ ಹಿಡಿದ ಗುರುತುಗಳು ಕಂಡು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com