ಪಾಕ್ ಹಾಸ್ಟೆಲ್'ನಲ್ಲಿ ಹಿಂದೂ ವಿದ್ಯಾರ್ಥಿನಿ ಶವ ಪತ್ತೆ: ಕೊಲೆ ಶಂಕೆ

ಪಾಕಿಸ್ತನಾದ ಸಿಂಧ್ ಪ್ರಾಂತ್ಯದ ದಂತ ವೈದ್ಯಕೀಯ ಕಾಲೇಜು ಹಾಸ್ಟೆಲ್ ವೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 
ಮೃತ ವಿದ್ಯಾರ್ಥಿನಿ
ಮೃತ ವಿದ್ಯಾರ್ಥಿನಿ

ಕರಾಚಿ: ಪಾಕಿಸ್ತನಾದ ಸಿಂಧ್ ಪ್ರಾಂತ್ಯದ ದಂತ ವೈದ್ಯಕೀಯ ಕಾಲೇಜು ಹಾಸ್ಟೆಲ್ ವೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. 

ನಮ್ರತಾ ಚಾಂದಿನಿ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಲರ್ಕಾನ್ ಜಿಲ್ಲೆಯ ನಿವಾಸಿಯಾದ ನಮ್ರತಾ ದಂತ ವೈದ್ಯಕೀಯ ವ್ಯಾಸಾಂಗ ಮಾಡುತ್ತಿದ್ದಳು. ನಮ್ರತಾ ಕೊರಳಿಗೆ ಕೇಬಲ್ ವೈಯರ್ ಸುತ್ತಿದ್ದು, ಕೈಗಳನ್ನು ಬಲವಾಗಿ ಹಿಡಿದ ಗುರುತುಗಳಿವೆ. 

ಕೊಲೆ ನಡೆದಿರುವ ಶಂಕೆ ಇದೆ ಎಂದು ನಮ್ರತಾ ಸಹೋದರ ವಿಶಾಲ್ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಕಾಲೇಜು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com