ಪಿಒಕೆ ನಮ್ಮದು: ಭಾರತದ ಹೇಳಿಕೆ ವಿರುದ್ಧ ಪಾಕಿಸ್ತಾನ ಕೆಂಡಾಮಂಡಲ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಮುಂದೊಂದು ದಿನ ಪಿಒಕೆ ಮೇಲೆ ಭಾರತ ಕಾನೂನು ಬದ್ಧವಾಗಿಯೇ ಹಕ್ಕು ಹೊಂದಲಿದೆ ಎಂಬ ಭಾರತದ ಹೇಳಿಕೆಗೆ ಪಾಕಿಸ್ತಾನ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು, ಭಾರತದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಜಾಗತಿಕ ಸಮುದಾಯಕ್ಕೆ ಶುಕ್ರವಾರ ಆಗ್ರಹಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಿಒಕೆ ಕುರಿತ ಭಾರತದ ಹೇಳಿಕೆ ಗಂಭೀರವಾಗಿ ಪರಿಗಣಿಸುವಂತೆ ಜಾಗತಿಕ ಸಮುದಾಯಕ್ಕೆ ಪಾಕ್ ಆಗ್ರಹ

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಮುಂದೊಂದು ದಿನ ಪಿಒಕೆ ಮೇಲೆ ಭಾರತ ಕಾನೂನು ಬದ್ಧವಾಗಿಯೇ ಹಕ್ಕು ಹೊಂದಲಿದೆ ಎಂಬ ಭಾರತದ ಹೇಳಿಕೆಗೆ ಪಾಕಿಸ್ತಾನ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು, ಭಾರತದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಜಾಗತಿಕ ಸಮುದಾಯಕ್ಕೆ ಶುಕ್ರವಾರ ಆಗ್ರಹಿಸಿದೆ. 

ಭಾರತದ ಹೇಳಿಕೆಗೆ ಸಿಡಿಮಿಡಿಗೊಂಡಿರುವ ಪಾಕಿಸ್ತಾನ, ಇದೀಗ ಕೆಂಡ ಕಾರುತ್ತಿದ್ದು, ಭಾರತ ಬೇವಾಬ್ದಾರಿ ಹಾಗೂ ಯುದ್ಧೋನ್ಮಾದ ಪ್ರದರ್ಶಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದೆ. ಇಂತಹ ಹೇಳಿಕೆಗಳು ಕಾಶ್ಮೀರದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದ. ಕಾಶ್ಮೀರದಲ್ಲಿನ ಶಾಂತಿ ಹಾಗೂ ಸುರಕ್ಷತೆಯನ್ನು ಗಂಭೀರ ರೀತಿಯಲ್ಲಿ ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಿದೆ. 

ನಿನ್ನೆಯಷ್ಟೇ ಪಿಒಕೆ ಕುರಿತಂತೆ ಹೇಳಿಕೆ ನೀಡಿದ್ದ ವಿದೇಶಾಂಗ ಸಚಿವ ಜೈಶಂಕರ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತಂತೆ ಭಾರತ ಸ್ಪಷ್ಟ ನಿಲುವು ಹೊಂದಿದೆ. ಭವಿಷ್ಯದಲ್ಲಿ ಭಾರತ ಪಿಒಕೆ ಮೇಲೆ ನ್ಯಾಯಯುತವಾಗಿ ಹಕ್ಕು ಹೊಂದಲಿದೆ. ಪಿಒಕೆ ಎಂದಿಗೂ ನಮ್ಮ ದೇಶದ ಭಾಗ. ಅದನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com