ಮೋದಿ, ಟ್ರಂಪ್ (ಸಂಗ್ರಹ ಚಿತ್ರ)
ಮೋದಿ, ಟ್ರಂಪ್ (ಸಂಗ್ರಹ ಚಿತ್ರ)

ಟ್ರಂಪ್-ಮೋದಿ ಜಂಟಿ ಭಾಷಣ ಭಾರತೀಯ ಅಮೆರಿಕನ್ನರ ಕೊಡುಗೆಗೆ ನೀಡುತ್ತಿರುವ ಐತಿಹಾಸಿಕ ಗೌರವ: ಅಮೆರಿಕಾ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜಂಟಿ ಭಾಷಣ ಭಾರತೀಯ ಅಮೆರಿಕನ್ನರಿಗೆ ನೀಡುತ್ತಿರುವ ನಿಜವಾದ ಐತಿಹಾಸಿಕ ಗೌರವ ಎಂದು ಅಮೆರಿಕಾ ಶುಕ್ರವಾರ ಹೇಳಿದೆ.

ವಾಷಿಂಗ್ಟನ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜಂಟಿ ಭಾಷಣ ಭಾರತೀಯ ಅಮೆರಿಕನ್ನರಿಗೆ ನೀಡುತ್ತಿರುವ ನಿಜವಾದ ಐತಿಹಾಸಿಕ ಗೌರವ ಎಂದು ಅಮೆರಿಕಾ ಶುಕ್ರವಾರ ಹೇಳಿದೆ. 

ಕಾರ್ಯಕ್ರಮ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿ ಆಲಿಸ್ ಜಿ. ವೆಲ್ಸ್ ಅವರು, ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಮೋದಿಯವರೊಂದಿಗೆ ಪಾಲ್ಗೊಳ್ಳುತ್ತಿರುವುದು ಭಾರತೀಯ ಅಮೆರಿಕಾ ಸಮುದಾಯಕ್ಕೆ ನೀಡುತ್ತಿರುವ ಬಹುದೊಡ್ಡ ಐತಿಹಾಸಿಕ ಗೌರವವಾಗಿದೆ. ಇದು ಭಾರತ ಮತ್ತು ಅಮೆರಿಕಾದ ನಡುವಿನ ಸಂಬಂಧಕ್ಕೆ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಹೇಳಿದ್ದಾರೆ. 

ಅಮೆರಿಕಾದ ಹೂಸ್ಟನ್ ನಲ್ಲಿ ಸೆ.22 ರಂದು ಅನಿವಾಸಿ ಭಾರತೀಯರು ಆಯೋಜಿಸಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಆಗಮಿಸುತ್ತಿದ್ದಾರೆ. 

ಉಭಯ ರಾಷ್ಟ್ರಗಳ ನಾಯಕರು ಭಾಗವಹಿಸಲಿರುವ ಈ ಮೆಗಾ ಕಾರ್ಯಕ್ರಮಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. 

ಭಾರತೀಯ ಸಮುದಾಯದವರು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪ್ರಪ್ರಥಮ ಬಾರಿಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಭಾಗವಹಿಸುತ್ತಿದ್ದಾರೆ. ಜಗತ್ತಿನ ಅತೀದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳ ಉಭಯ ನಾಯಕರು ಒಂದೇ ವೇದಿಕೆ ಹಂಚಿಕೊಳ್ಳುತ್ತಿರುವುದರಿಂದ ಈ ಮೇಳವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 

ವಿಶ್ವದಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಉಭಯ ರಾಷ್ಟ್ರಗಳ ಮುಖಂಡರು ಮಾತನಾಡುವುದು ಇದೇ ಮೊದಲು, ಇದನ್ನು ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯವವನ್ನು ಮತ್ತಷ್ಟು ವೃದ್ಧಿಸುವ ಅತಿದೊಡ್ಡ ಅವಕಾಶ ಎಂದೇ ಪರಿಗಣಿಸಲಾಗುತ್ತಿದೆ. 

ಭಾರತ-ಅಮೆರಿಕಾದ ವಾಣಿಜ್ಯೋದ್ಯಮ ಸೇರಿದಂತೆ ಇತರ ವ್ಯಾಪಾರ ಉದ್ಯಮಕ್ಕೂ ಈ ಮೆಗಾ ಕಾರ್ಯಕ್ರಮ ಸಹಕಾರಿಯಾಗಲಿದೆ. ಅಲ್ಲದೆ, ಭಾರತದ ಪ್ರಧಾನಿ ಮೋದಿಯವರ ಕರೆಗೆ ಟ್ರಂಪ್ ಅವರು ಓಗೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ ಸಿಕ್ಕ ಬಹುದೊಡ್ಡ ಜಯ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಅಮೆರಿಕಾದ ರಾಜಕಾರಣಿಯಲ್ಲದ ಬೇರೊಂದು ದೇಶದ ರಾಜಕೀಯ ನಾಯಕರ ಆಗಮನಕ್ಕೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನರು ಆಗಮಿಸುತ್ತಿರುವುದು ಇದೇ ಮೊದಲು. 

Related Stories

No stories found.

Advertisement

X
Kannada Prabha
www.kannadaprabha.com