ದಕ್ಷಿಣ ಆಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ದಾಳಿ; 20 ಮಂದಿ ಸಾವು,90ಕ್ಕೂ ಅಧಿಕ ಮಂದಿಗೆ ಗಾಯ 

ದಕ್ಷಿಣ ಆಫ್ಘಾನಿಸ್ತಾನದ ಆಸ್ಪತ್ರೆಯೊಂದರಲ್ಲಿ ಗುರುವಾರ ನಸುಕಿನ ಜಾವ ಆತ್ಮಹತ್ಯಾ ಟ್ರಕ್ ಬಾಂಬ್ ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟಿದ್ದು 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 
ದಾಳಿಗೆ ಆಂಬ್ಯುಲೆನ್ಸ್ ವಾಹನಗಳು ನಾಶವಾಗಿರುವುದು
ದಾಳಿಗೆ ಆಂಬ್ಯುಲೆನ್ಸ್ ವಾಹನಗಳು ನಾಶವಾಗಿರುವುದು

                                       ದಾಳಿಯ ಹೊಣೆ ಹೊತ್ತುಕೊಂಡ ತಾಲಿಬಾನ್ 

ಕಾಬುಲ್: ದಕ್ಷಿಣ ಆಫ್ಘಾನಿಸ್ತಾನದ ಆಸ್ಪತ್ರೆಯೊಂದರಲ್ಲಿ ಗುರುವಾರ ನಸುಕಿನ ಜಾವ ಆತ್ಮಹತ್ಯಾ ಟ್ರಕ್ ಬಾಂಬ್ ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟಿದ್ದು 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


ತಾಲಿಬಾನ್ ಪಡೆ ದಾಳಿಯ ಹೊಣೆ ಹೊತ್ತುಕೊಂಡಿದೆ. ದಕ್ಷಿಣ ಆಫ್ಘಾನಿಸ್ತಾನದ ಜಾಬುಲ್ ಪ್ರಾಂತ್ಯದ ಖಲತ್ ನ ಆಸ್ಪತ್ರೆಯ ಒಂದು ಭಾಗ ನಾಶವಾಗಿದ್ದು ಆಸ್ಪತ್ರೆಯ ಆಂಬ್ಯುಲೆನ್ಸ್ ಮುರಿದು ಜರ್ಝರಿತವಾಗಿ ಹೋಗಿದೆ.


ಆಸ್ಪತ್ರೆಗೆ ತಮ್ಮ ಬಂಧುಗಳನ್ನು ನೋಡಿ ಆರೋಗ್ಯ ವಿಚಾರಿಸಲೆಂದು ಬಂದಿದ್ದವರು ಹೆಚ್ಚು ಮಂದಿ ದಾಳಿಗೆ ಆಹುತಿಯಾಗಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಕಂದಹಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ತಿಂಗಳ ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ ಜೊತೆ ಮಾತುಕತೆ ವಿಫಲವಾದ ನಂತರ ತಾಲಿಬಾನೀಯರು ಪ್ರತಿದಿನವೆಂಬಂತೆ ದಾಳಿ ನಡೆಸುತ್ತಿದ್ದು, ಸರ್ಕಾರದ ಗುಪ್ತಚರ ಇಲಾಖೆ ಕಟ್ಟಡವನ್ನು ಗುರಿಯಾಗಿಟ್ಟುಕೊಂಡು ಇಂದು ದಾಳಿ ನಡೆಸಿತ್ತು.


ಇಂದಿನ ದಾಳಿಯಲ್ಲಿ ರಾಷ್ಟ್ರೀಯ ಭದ್ರತಾ ಇಲಾಖೆಯ ಕಟ್ಟಡದ ಗೋಡೆ ಸಹ ಸ್ವಲ್ಪ ಹಾನಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com