ವಿಕ್ರಮ್ ಲ್ಯಾಂಡರ್ ನ  ಸ್ಥಾನವನ್ನು ಸದ್ಯಕ್ಕೆ ಗುರುತಿಸುವುದು ಕಷ್ಟ: ನಾಸಾ ವಿಜ್ಞಾನಿಗಳು

ಚಂದ್ರನ ಮೇಲ್ಮೈಯನ್ನು ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಪ್ರದೇಶದಲ್ಲಿ ನಾಸಾದ ಲೂನಾರ್ ರಿಕನ್ನೈಸನ್ಸ್ ಆರ್ಬಿಟರ್(ಎಲ್ಆರ್ ಒ) ಕ್ಯಾಮರಾ ಸಹಾಯದಿಂದ ಚಿತ್ರಗಳನ್ನು ತೆಗೆಯಲಾಗಿದ್ದರೂ ಕೂಡ ಅಲ್ಲಿನ ಬೆಳಕು ಸ್ಥಿತಿಗತಿ ಸ್ಪಷ್ಟವಾಗಿಲ್ಲದ ಕಾರಣ ವಿಕ್ರಂ ಲ್ಯಾಂಡರ್ ನ ಸ್ಥಾನ ಸದ್ಯಕ್ಕೆ ಎಲ್ಲಿದೆ ಎಂದು ಗುರುತುಹಿಡಿಯುವುದು ಕಷ್ಟವಾಗಿದೆ ಎಂದು ಎಲ್ಆರ್ ಒ ಪ್ರಾಜೆಕ್ಟ್ ವಿಜ್ಞಾ
ಇಸ್ರೊ ಬಿಡುಗಡೆ ಮಾಡಿದ್ದ ಲ್ಯಾಂಡರ್ ವಿಕ್ರಮ್ ಚಿತ್ರ
ಇಸ್ರೊ ಬಿಡುಗಡೆ ಮಾಡಿದ್ದ ಲ್ಯಾಂಡರ್ ವಿಕ್ರಮ್ ಚಿತ್ರ

ನ್ಯೂಯಾರ್ಕ್: ವಿಕ್ರಂ ಲ್ಯಾಂಡರ್ ನ ಸ್ಥಾನವನ್ನು ಸದ್ಯಕ್ಕೆ ಪತ್ತೆಹಚ್ಚುವುದು ಕಷ್ಟ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.


ಚಂದ್ರನ ಮೇಲ್ಮೈಯನ್ನು ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಪ್ರದೇಶದಲ್ಲಿ ನಾಸಾದ ಲೂನಾರ್ ರಿಕನ್ನೈಸನ್ಸ್ ಆರ್ಬಿಟರ್(ಎಲ್ಆರ್ ಒ) ಕ್ಯಾಮರಾ ಸಹಾಯದಿಂದ ಚಿತ್ರಗಳನ್ನು ತೆಗೆಯಲಾಗಿದ್ದರೂ ಕೂಡ ಅಲ್ಲಿನ ಬೆಳಕು ಸ್ಥಿತಿಗತಿ ಸ್ಪಷ್ಟವಾಗಿಲ್ಲದ ಕಾರಣ ವಿಕ್ರಂ ಲ್ಯಾಂಡರ್ ನ ಸ್ಥಾನ ಸದ್ಯಕ್ಕೆ ಎಲ್ಲಿದೆ ಎಂದು ಗುರುತುಹಿಡಿಯುವುದು ಕಷ್ಟವಾಗಿದೆ ಎಂದು ಎಲ್ಆರ್ ಒ ಪ್ರಾಜೆಕ್ಟ್ ವಿಜ್ಞಾನಿಗಳು ತಿಳಿಸಿದ್ದಾರೆ.


ನಾಸಾದ ದೊಡ್ಡರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಎಲ್ಆರ್ ಒ ಯೋಜನೆ ವಿಜ್ಞಾನಿ ನೋವಾ ಪೆಟ್ರೋ, ಕಳೆದ ಮಂಗಳವಾರ ತೆಗೆದಿರುವ ಚಿತ್ರವನ್ನು ವಿಶ್ಲೇಷಿಸಲಾಗುತ್ತಿದ್ದು ಲ್ಯಾಂಡರ್ ನ್ನು ಗುರುತು ಹಿಡಿದ ನಂತರ ನಾವು ಅದರ ಬಗ್ಗೆ ಹೇಳುತ್ತೇವೆ. ಲ್ಯಾಂಡರ್ ಈಗಿರುವ ಸ್ಥಳದಲ್ಲಿ ಬೆಳಕು ಸ್ಪಷ್ಟವಾಗಿಲ್ಲ. ಹೀಗಾಗಿ ಲ್ಯಾಂಡರ್ ನ ನಿಖರವಾದ ಸ್ಥಳವನ್ನು ಪತ್ತೆಹಚ್ಚುವುದು ಕಷ್ಟವಾಗಿದೆ, ವಿಕ್ರಂ ಲ್ಯಾಂಡಿಂಗ್ ಎಲ್ಲಿ ಆಗಿದೆ ಎಂದು ತಿಳಿದುಕೊಳ್ಳಲು ಮುಂದಿನ ಅಕ್ಟೋಬರ್ 14ಕ್ಕೆ ಇನ್ನೊಂದು ಚಿತ್ರ ಸಿಗುವ ಸಾಧ್ಯತೆಯಿದೆ. ಅಂದು ಎಲ್ಆರ್ ಒ ಚಂದ್ರನ ಆ ಪ್ರದೇಶದ ಮೂಲಕ ಹಾದುಹೋಗುತ್ತದೆ ಎಂದು ಹೇಳಿದ್ದಾರೆ.


ಎಲ್ಆರ್ಒ ನಿನ್ನೆ ಹಾದುಹೋದ ಸಮಯ ಮುಸ್ಸಂಜೆ ಹೊತ್ತಾಗಿತ್ತು. ಆ ಪ್ರದೇಶದಲ್ಲಿ ದಟ್ಟ ಕತ್ತಲು ಕವಿದಿತ್ತು. ಎಲ್ಆರ್ ಒಸಿ ನಿಗದಿತ ಲ್ಯಾಂಡಿಂಗ್ ಪ್ರದೇಶದ ಸುತ್ತಮುತ್ತ ದೊಡ್ಡ ಚಿತ್ರವನ್ನು ತೆಗೆದಿದ್ದರೂ ಕೂಡ ವಿಕ್ರಂ ಲ್ಯಾಂಡಿಂಗ್ ನ ನಿರ್ದಿಷ್ಟ ಸ್ಥಳದ ಗುರುತು ಸಿಕ್ಕಿಲ್ಲ ಎಂದು ನಾಸಾ ಹೇಳಿದೆ.


ವಿಜ್ಞಾನಿಗಳ ತಂಡ ನಿನ್ನೆ ಸಿಕ್ಕಿದ ಚಿತ್ರವನ್ನು ಈ ಹಿಂದಿನ ಚಿತ್ರಗಳ ಜೊತೆ ಹೋಲಿಕೆ ಮಾಡಿ ವಿಕ್ರಂ ಲ್ಯಾಂಡರ್ ಪತ್ತೆಯಾಗುತ್ತದೆಯೇ ಎಂದು ನೋಡಲಿದೆ ಎಂದು ಹೇಳಿದೆ.


ಚಂದ್ರಯಾನ 2 ಚಂದ್ರನ ಕಕ್ಷಾಗಾರದಿಂದ ಕಳೆದ ಸೆಪ್ಟೆಂಬರ್ 6ರಂದು ವಿಕ್ರಮ್ ಇಸ್ರೊದಿಂದ ಸಂಪರ್ಕ ಕಡಿತಗೊಂಡಿತ್ತು. ವಿಕ್ರಂ ಲ್ಯಾಂಡರ್ ಉದ್ದೇಶಿತ ಪಥವನ್ನು ಅನುಸರಿಸಿದ ನಂತರ, ಕೊನೆಯ ಎರಡು ಕಿಲೋಮೀಟರ್ ಅವಧಿಯಲ್ಲಿ ಅಂತಿಮ ಕ್ಷಣಗಳಲ್ಲಿ ವಿಮುಖವಾಗಿ ಸಂಪರ್ಕ ಕಳೆದುಕೊಂಡಿತ್ತು.


ಚಂದ್ರನ ಮೇಲ್ಮೈಯಲ್ಲಿ ವಿವಿಧ ರೀತಿಯ ಪ್ರಯೋಗ ನಡೆಸಲು ವಿಕ್ರಂ ಪ್ರಜ್ಞ್ಯಾನ ರೋವರ್ ನ್ನು ಹೊತ್ತೊಯ್ದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com