ಭಾರತೀಯ ಯೋಧರಿಗಾಗಿ 'ಜನ ಗಣ ಮನ' ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್: ವಿಡಿಯೋ ವೈರಲ್

ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡೆಸುತ್ತಿರುವ ಜಂಟಿ ಸಮಾರಾಭ್ಯಾಸದ ವೇಳೆ ಭಾರತೀಯ ಯೋಧರಿಗಾಗಿ ಅಮೆರಿಕಾ ಸೇನಾ ಬ್ಯಾಂಡ್ ರಾಷ್ಟ್ರಗೀತೆ 'ಜನ ಗಣ ಮನ' ನುಡಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಭಾರತೀಯ ಯೋಧರಿಗಾಗಿ 'ಜನ ಗಣ ಮನ' ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್: ವಿಡಿಯೋ ವೈರಲ್
ಭಾರತೀಯ ಯೋಧರಿಗಾಗಿ 'ಜನ ಗಣ ಮನ' ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್: ವಿಡಿಯೋ ವೈರಲ್

ವಾಷಿಂಗ್ಟನ್: ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡೆಸುತ್ತಿರುವ ಜಂಟಿ ಸಮಾರಾಭ್ಯಾಸದ ವೇಳೆ ಭಾರತೀಯ ಯೋಧರಿಗಾಗಿ ಅಮೆರಿಕಾ ಸೇನಾ ಬ್ಯಾಂಡ್ ರಾಷ್ಟ್ರಗೀತೆ 'ಜನ ಗಣ ಮನ' ನುಡಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬುಧವಾರ ಉಭಯ ಸೇನೆಗಳ ಜಂಟಿ ಸಮರಾಭ್ಯಾಸದ ಕೊನೆಯ ದಿನವಾಗಿದ್ದು, ಈ ಹಿನ್ನಲೆಯಲ್ಲಿ ಅಮೆರಿಕಾ ಸೇನಾ ಬ್ಯಾಂಡ್ ಭಾರತದ ರಾಷ್ಟ್ರಗೀತೆಯನ್ನು ನುಡಿಸಿದೆ. 

ಭಾರತ ಮತ್ತು ಅಮೆರಿಕಾ ನಡುವಣ ರಕ್ಷಣಾ ಸಹಕಾರದ ಭಾಗವಾಗಿ 'ಯುದ್ಧ್ ಅಭ್ಯಾಸ್' ಎಂಬ ಹೆಸರಿನಲ್ಲಿ ಉಭಯ ಸೇನೆಗಳು ಜಂಟಿ ಸಮರಾಭ್ಯಾಸವನ್ನು ಕಳೆದ ಶುಕ್ರವಾರದಿಂದ ವಾಷಿಂಗ್ಟನ್'ನಲ್ಲಿ ಆರಂಭಿಸಿತ್ತು. ಇದರಂತೆ ಜಂಟಿ ಸಮರಾಭ್ಯಾಸ ನಿನ್ನೆ ಅಮರಿಕಾದ ರಾಜಧಾನಿ ವಾಷಿಂಗ್ಟನ್'ನ ಜಾಯಿಂಟ್ ಬೇಸ್ ಲೂಯಿಸ್ ಮ್ಯಾಕ್'ಕಾರ್ಡ್ ನಲ್ಲಿ ಕೊನೆಗೊಂಡಿತ್ತು. 

ಕಳೆದ ಭಾನುವಾರ ಉಭಯ ರಾಷ್ಟ್ರಗಳ ಸೇನಾ ಯೋಧರು ಅಸ್ಸಾಂ ರೆಜಿಮೆಂಟ್'ನ ಮಾರ್ಚಿಂಗ್ ಸಾಂಗ್ 'ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ'ಯನ್ನು ಹಾಡುತ್ತಿರುವ ಮತ್ತು ಅದಕ್ಕೆ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಈ ಗೀತೆ 2ನೇ ವಿಶ್ವಯುದ್ಧದ ನೈಜ ಕಥೆಯೊಂದನ್ನು ಆಧರಿಸಿದೆ. ಭಾರತೀಯ ಸೇನೆಯ ಯೋಧ ಬದ್ಲುರಾಮ್ ಜಪಾನ್ ವಿರುದ್ಧ ಹೋರಾಡಿ ಮರಣಹೊಂದಿದ್ದ. ಬದ್ಲುರಾಮ್ ಸಾವಿನ ಬಳಿಕ, ಒಬ್ಬ ಅಧಿಕಾರಿ ಬದ್ಲುರಾಮ್ ಸಾವನ್ನು ಸೈನ್ಯಕ್ಕೆ ವರದಿ ಮಾಡಲು ಮರೆತು ಹೋಗಿದ್ದರು. ಇದರ ಪರಿಣಾಮವಾಗಿ, ಬದ್ಲುರಾಮ್'ನ ಆಹಾರ ಸಾಮಾಗ್ರಿ ಸೇನಾ ಘಟಕ್ಕೆ ಹೆಚ್ಚುವರಿ ಪಡಿತರ ರೂಪದಲ್ಲಿ ಬರುತ್ತಲೇ ಇತ್ತು. ಈ ಆಹಾರವೇ ಅಂತಿಕವಾಗಿ ಭಾರತೀಯ ಸೈನಿಕರ ಉಳಿಗೆ ಕಾರಣವಾಗಿತ್ತು. ಈ ಕಥೆಯನ್ನು ಆಧರಿಸಿ ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಎಂಬ ಹಾಡನ್ನು ರಚನೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com