ವಿಶ್ವಸಂಸ್ಥೆಗೆ ಸೌರಶಕ್ತಿ ಘಟಕ ಉಡುಗೊರೆಯಾಗಿ ನೀಡಲಿದ್ದಾರೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೂಸ್ಟನ್ ಮತ್ತು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದು, ಸೌರಶಕ್ತಿ ವಿದ್ಯುತ್ ಸ್ಥಾವರವನ್ನು ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಲಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೂಸ್ಟನ್ ಮತ್ತು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದು, ಸೌರಶಕ್ತಿ ವಿದ್ಯುತ್ ಸ್ಥಾವರವನ್ನು ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಲಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರ 150ನೇ ಜಯಂತಿಯ ವಾರ್ಷಿಕೋತ್ಸವ ಪ್ರಯುಕ್ತ ವಿಶ್ವಸಂಸ್ಥೆ ಹೊರತರತ್ತಿರುವ ವಿಶೇಷ ಅಂಚೆಚೀಟಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ಸೆಪ್ಟೆಂಬರ್ 24ರಂದು ಔಪಚಾರಿಕವಾಗಿ ಉದ್ಘಾಟಿಸಲಿರುವ ಗಾಂಧಿ ಸೌರ ಘಟಕದ ವೆಚ್ಚ ಸುಮಾರು 1 ದಶಲಕ್ಷ ಡಾಲರ್ ಎಂದು ಮಾಹಿತಿ ನೀಡಿದರು.

ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನ ಕಚೇರಿಗೆ ವಿದ್ಯುತ್ ಪೂರೈಸಲು ಈ ಘಟಕವು 50 ಕಿಲೋವ್ಯಾಟ್ "ಹಸಿರು" ವಿದ್ಯುತ್ ಉತ್ಪಾದಿಸುತ್ತದೆ. ನಗರದ ಸ್ಕೈಲೈನ್ ಕಟ್ಟಡದ ಮೇಲ್ಛಾವಣಿಯಲ್ಲಿ ಸೌರ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com