ಹೌದಿ-ಮೋದಿ ಕಾರ್ಯಕ್ರಮಕ್ಕೆ ಅಮೆರಿಕಾದ ಹೌಸ್ಟನ್ ನಲ್ಲಿ ವೇದಿಕೆ ಸಜ್ಜು; ಎಲ್ಲೆಲ್ಲೂ ಮೋದಿ ಜೈಕಾರ

ಈಗ ಎಲ್ಲೆಲ್ಲೂ ಹೌದಿ ಮೋದಿಯದ್ದೇ ಸುದ್ದಿ, ಅಮೆರಿಕಾದ ಹೌಸ್ಟನ್ ನಲ್ಲಿ ನಾಳೆ ಬೃಹತ್ ಹೌದಿ- ಮೋದಿ ಕಾರ್ಯಕ್ರಮ ನಡೆಯಲಿದ್ದು ಸುಮಾರು 50 ಸಾವಿರ ಪ್ರೇಕ್ಷಕರು ಸೇರಲಿದ್ದಾರೆ. 
ಮೋದಿ ಪರ ಅಮೆರಿಕಾದ ಭಾರತೀಯರ ಉದ್ಘಾರ
ಮೋದಿ ಪರ ಅಮೆರಿಕಾದ ಭಾರತೀಯರ ಉದ್ಘಾರ

ಹೌಸ್ಟನ್:ಈಗ ಎಲ್ಲೆಲ್ಲೂ ಹೌದಿ ಮೋದಿಯದ್ದೇ ಸುದ್ದಿ, ಅಮೆರಿಕಾದ ಹೌಸ್ಟನ್ ನಲ್ಲಿ ನಾಳೆ ಬೃಹತ್ ಹೌದಿ- ಮೋದಿ ಕಾರ್ಯಕ್ರಮ ನಡೆಯಲಿದ್ದು ಸುಮಾರು 50 ಸಾವಿರ ಪ್ರೇಕ್ಷಕರು ಸೇರಲಿದ್ದಾರೆ. ಪೋಪ್ ನಂತರ ವಿದೇಶದ ರಾಜಕೀಯ ನಾಯಕರೊಬ್ಬರು ಭೇಟಿ ನೀಡುತ್ತಿರುವ ಬೃಹತ್ ಕಾರ್ಯಕ್ರಮ ಇದೇ ಮೊದಲು. ಹೀಗಾಗಿ ಸಹಜವಾಗಿ ಅಲ್ಲಿ ಮೋದಿ ಕಳೆ ಕಟ್ಟಲಿದೆ.


ಅಮೆರಿಕಾದ ಹೌಸ್ಟನ್ ನಲ್ಲಿರುವ ಅತಿದೊಡ್ಡ ಎನ್ಆರ್ ಜಿ ಫುಟ್ ಬಾಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಈಗಾಗಲೇ ವೇದಿಕೆ ಸಿದ್ದವಾಗಲಿದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಕಣ್ತುಂಬಿಕೊಳ್ಳಲು ಭಾರತೀಯರು ಮತ್ತು ಅಮೆರಿಕನ್ನರು ಸಿದ್ದವಾಗಿ ಕುಳಿತಿದ್ದಾರೆ. ಬೆಯೋನ್ಸ್, ಮೆಟಾಲಿಕಾ, ಯು 2 ಅವರ ಕಾರ್ಯಕ್ರಮ ಇನ್ನಷ್ಟು ಮೆರುಗು ನೀಡಲಿದೆ.


ಅಮೆರಿಕಾದ ಭಾರತೀಯ ರಾಯಭಾರಿ ಹರ್ಷ ವಿ ಶೃಂಗ್ಲಾ ಮತ್ತು ಅವರ ತಂಡ ನಿನ್ನೆ ಎನ್ ಆರ್ ಜಿ ಸ್ಟೇಡಿಯಂನಲ್ಲಿ ಸಮಾರಂಭದ ಪೂರ್ವ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ಸಿದ್ದತೆ ಕಾರ್ಯ ಭರದಿಂದ ಸಾಗಿದ್ದು ಒಂದೂವರೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.


ನಿನ್ನೆ ಈ ಸ್ಟೇಡಿಯಂನಲ್ಲಿ ಕಾರ್ ರ್ಯಾಲಿ ಆಯೋಜಿಸಲಾಗಿತ್ತು. 200ಕ್ಕೂ ಹೆಚ್ಚು ಕಾರುಗಳು ಭಾಗವಹಿಸಿದ್ದವು. ಭಾರತ ಮತ್ತು ಅಮೆರಿಕಾ ದೇಶಗಳ ಧ್ವಜಗಳು ಹಾರಾಟವಾಗಿದ್ದವು. ಸಂಘಟಿತರು ಮತ್ತು ಕಾರ್ಯಕರ್ತರು ನಮೋ ಅಗೈನ್ ಶರ್ಟ್ ಗಳನ್ನು ತೊಟ್ಟು ನಮೋ ಅಗೈನ್ ಘೋಷಣೆ ಕೂಗುತ್ತಿದ್ದರು.


ಟೆಕ್ಸಾಸ್ ಇಂಡಿಯಾ ಫೋರಂ(ಟಿಐಎಫ್) ವಕ್ತಾರರಾದ ಪ್ರೀತಿ ದವ್ರಾ, ಗಿತೀಶ್ ದೇಸಾಯಿ ಮತ್ತು ರಿಶಿ ಭುಟಡಾ  ಸುದ್ದಿಗಾರರಿಗೆ ಮಾಹಿತಿ ನೀಡಿ, ಕಾರ್ಯಕ್ರಮದಿಂದ ಏನು ನಿರೀಕ್ಷೆಗಳಿವೆ ಮತ್ತು ಹೌಸ್ಟನ್ ನ್ನು ಏಕೆ ಆಯ್ಕೆ ಮಾಡಿಕೊಂಡರು ಎಂದು ವಿವರಿಸಿದರು.


ಅಮೆರಿಕಾ ಮತ್ತು ಭಾರತದ ಏಕತೆ ಮತ್ತು ಸಂಸ್ಕೃತಿ ವಿನಿಮಯಕ್ಕೆ ಇದೊಂದು ದೊಡ್ಡ ವೇದಿಕೆ, 30 ಲಕ್ಷಕ್ಕೂ ಅಧಿಕ ಭಾರತೀಯ ಅಮೆರಿಕನ್ನರು ಭಾಗಿಯಾಗಲಿದ್ದು ಇಲ್ಲಿ ಮೋದಿಯವರು ಭಾರತ-ಅಮೆರಿಕಾ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತನಾಡಲಿದ್ದಾರೆ. ಅಮೆರಿಕಾ-ಭಾರತ ಭೌಗೋಳಿಕ ರಾಜಕೀಯ ಸಹಭಾಗಿತ್ವ, ಉದ್ಯಮಶೀಲತೆಯ ಮೂಲಕ ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ಬದ್ಧತೆ, ಕಠಿಣ ಪರಿಶ್ರಮ ಮತ್ತು ಎರಡೂ ರಾಷ್ಟ್ರಗಳ ಜನರ ತ್ಯಾಗಗಳನ್ನು ರಾಜಕೀಯ ನಾಯಕರು ವಿವರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com