ವಿಶ್ವಸಂಸ್ಥೆಗೆ ಸೌರಶಕ್ತಿ ವಿದ್ಯುತ್ ಸ್ಥಾವರವನ್ನು ಉಡುಗೊರೆಯಾಗಿ ನೀಡಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೂಸ್ಟನ್ ಮತ್ತು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದು, ಸೌರಶಕ್ತಿ ವಿದ್ಯುತ್ ಸ್ಥಾವರವನ್ನು ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಲಿದ್ದಾರೆ ಮತ್ತು ಮಹಾತ್ಮ ಗಾಂಧಿಯವರ...

Published: 21st September 2019 08:49 AM  |   Last Updated: 21st September 2019 08:49 AM   |  A+A-


PM modi

ಪ್ರಧಾನಿ ಮೋದಿ

Posted By : Manjula VN
Source : UNI

ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೂಸ್ಟನ್ ಮತ್ತು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದು, ಸೌರಶಕ್ತಿ ವಿದ್ಯುತ್ ಸ್ಥಾವರವನ್ನು ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಲಿದ್ದಾರೆ ಮತ್ತು ಮಹಾತ್ಮ ಗಾಂಧಿಯವರ 150ನೇ ಜಯಂತಿಯ ವಾರ್ಷಿಕೋತ್ಸವ ಪ್ರಯುಕ್ತ ವಿಶ್ವಸಂಸ್ಥೆ ಹೊರತರತ್ತಿರುವ ವಿಶೇಷ ಅಂಚೆಚೀಟಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ಸೆಪ್ಟೆಂಬರ್ 24ರಂದು ಔಪಚಾರಿಕವಾಗಿ ಉದ್ಘಾಟಿಸಲಿರುವ ಗಾಂಧಿ ಸೌರ ಘಟಕದ ವೆಚ್ಚ ಸುಮಾರು 1 ದಶಲಕ್ಷ ಡಾಲರ್ ಎಂದು ಮಾಹಿತಿ ನೀಡಿದರು.

ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನ ಕಚೇರಿಗೆ ವಿದ್ಯುತ್ ಪೂರೈಸಲು ಈ ಘಟಕವು 50 ಕಿಲೋವ್ಯಾಟ್ "ಹಸಿರು" ವಿದ್ಯುತ್ ಉತ್ಪಾದಿಸುತ್ತದೆ. ನಗರದ ಸ್ಕೈಲೈನ್ ಕಟ್ಟಡದ ಮೇಲ್ಛಾವಣಿಯಲ್ಲಿ ಸೌರ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.

Stay up to date on all the latest ಅಂತಾರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp