ಮತ್ತೆ ಟ್ರೋಲ್ ಗೀಡಾದ ಇಮ್ರಾನ್ ಖಾನ್; ಮೋದಿ ವರ್ಸಸ್ ಇಮ್ರಾನ್ ಆತಿಥ್ಯದ ಬಗ್ಗೆ ಚರ್ಚೆ!

ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಗೆ ಅಮೆರಿಕಾಕ್ಕೆ ಬಂದಿಳಿದ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಸ್ವಾಗತ ಆತಿಥ್ಯದ ಬಗ್ಗೆ ನೆಟ್ಟಿಗರ ಟ್ವಟ್ಟರ್ ನಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ.
 

Published: 22nd September 2019 02:02 PM  |   Last Updated: 22nd September 2019 02:02 PM   |  A+A-


Imran Khan-PM Narendra Modi

ಇಮ್ರಾನ್ ಖಾನ್-ಪಿಎಂ ನರೇಂದ್ರ ಮೋದಿ

Posted By : Sumana Upadhyaya
Source : ANI

ನವದೆಹಲಿ; ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಗೆ ಅಮೆರಿಕಾಕ್ಕೆ ಬಂದಿಳಿದ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಸ್ವಾಗತ ಆತಿಥ್ಯದ ಬಗ್ಗೆ ನೆಟ್ಟಿಗರ ಟ್ವಟ್ಟರ್ ನಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ.


ಪಿಎಂ ಮೋದಿ ವ್ಯಾಪಾರ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ನಿರ್ದೇಶಕ ಕ್ರಿಸ್ಟೊಫರ್ ಒಲ್ಸೊನ್, ಅಮೆರಿಕಾಕ್ಕೆ ಭಾರತದ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ಇತರ ಕೆಲವು ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರೆ, ಸೌದಿ ದೊರೆ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಅವರ ವಿಮಾನದಲ್ಲಿ ಬಂದಿಳಿದ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ವಿಶ್ವಸಂಸ್ಥೆ ರಾಯಭಾರಿ ಮಲೀಹಾ ಲೊದಿ ಬರಮಾಡಿಕೊಂಡರು.


ಸೆಲೆಕ್ಟೆಡ್ ವರ್ಸಸ್ ಎಲೆಕ್ಟೆಡ್ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿ ಹೂವಿನ ಬೊಕ್ಕೆ ನೀಡಿದಾಗ ಅದರಿಂದ ಹೂವು ಕೆಳಗೆ ಬಿದ್ದಿದ್ದನ್ನು ಮೋದಿಯವರು ಹೆಕ್ಕಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಸುದ್ದಿಯಾಗಿದೆ.


ಮುಂದಿನ ಶುಕ್ರವಾರ ಮೋದಿ ಮತ್ತು ಇಮ್ರಾನ್ ಖಾನ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಮ್ರಾನ್ ಖಾನ್ ಭಾರತದ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದ್ದು ಪಿಎಂ ಮೋದಿಯವರು ದೇಶದ ಭದ್ರತೆ, ಶಾಂತಿ, ಅಭಿವೃದ್ಧಿ ಕುರಿತು ಮಾತನಾಡಲಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp