ಸೈಯದ್ ಅಕ್ಬರುದ್ದೀನ್, ಮೋದಿ
ಸೈಯದ್ ಅಕ್ಬರುದ್ದೀನ್, ಮೋದಿ

ವಿಶ್ವಸಂಸ್ಥೆ ಸಾಮಾನ್ಯಸಭೆ 74ನೇ ಅಧಿವೇಶನ: ಪ್ರಧಾನಿ ಮೋದಿ ನ್ಯೂಯಾರ್ಕ್ ಗೆ ಆಗಮನ

ಹ್ಯೂಸ್ಟನ್ ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ 50 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಕಾರ್ಯಕ್ರಮದ ನಂತರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ಗೆ ಆಗಮಿಸಿದ್ದಾರೆ.

ನ್ಯೂಯಾರ್ಕ್ : ಹ್ಯೂಸ್ಟನ್ ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ 50 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಕಾರ್ಯಕ್ರಮದ ನಂತರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ಗೆ ಆಗಮಿಸಿದ್ದಾರೆ.

ಭಾನುವಾರ ರಾತ್ರಿ ನ್ಯೂಯಾರ್ಕಿನ ಜೆಎಫ್ ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಿದರು.  ಮುಂದಿನ ಐದು ದಿನಗಳ ಕಾಲ ನ್ಯೂಯಾರ್ಕ್ ನಲ್ಲಿಯೇ ಉಳಿಯಲಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಷಣ ಸೇರಿದಂತೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. 

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನ ಅಭೂತಪೂರ್ವಕವಾಗಿ ಇರಲಿದೆ. ಇದರಿಂದ ಸದೃಢವಾದ ಕ್ರಿಯಾ ಆಧಾರಿತ ಪರಿಣಾಮ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

75 ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್  ವಿವಿಧ ವೇದಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಚೆಂಬರ್ ನಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಆಯೋಜಿಸಿರುವ  ಉನ್ನತ ಮಟ್ಟದ ಹವಾಮಾನ ಕ್ರಿಯಾ ಶೃಂಗಸಭೆಯೊಂದಿಗೆ ಮೋದಿಯ ಇಂದಿನ ದಿನದ ಕಾರ್ಯಕ್ರಮ ಆರಂಭವಾಗಲಿದೆ. 

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್, ಜರ್ಮನ್ ಛಾನ್ಸೆಲರ್ ಅಂಜಿಲಾ ಮಾರ್ಕೆಲಾ, ಮಾರ್ಷಲ್   ದ್ವೀಪಗಳ ಅಧ್ಯಕ್ಷ ಹಿಲ್ಡಾ ಹೈನ್ ಅವರೊಂದಿಗೆ ಪ್ರಧಾನಿ ಮೋದಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಮೋದಿ ಭೇಟಿ ಬೇಳೆಯಲ್ಲಿ ಅನೇಕ ದ್ವಿಪಕ್ಷೀಯ ವಿಚಾರಗಳ ಕುರಿತಂತೆ ಸಭೆ ನಡೆಸಲಿದ್ದು, ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 
 

Related Stories

No stories found.

Advertisement

X
Kannada Prabha
www.kannadaprabha.com