ಹ್ಯೂಸ್ಟನ್ ಕಾರ್ಯಕ್ರಮದಲ್ಲಿ ಭಾಗಿಯಾದ ಟ್ರಂಪ್ ಗೆ ಧನ್ಯವಾದ, ಯುಎಸ್-ಭಾರತ ಬಾಂಧವ್ಯಕ್ಕೆ ಮಹತ್ವದ ಕ್ಷಣ ಎಂದ ಮೋದಿ 

ಹ್ಯೂಸ್ಟನ್  ನಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. 
ಹ್ಯೂಸ್ಟನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಟ್ರಂಪ್ ಗೆ ಧನ್ಯವಾದ; ಯುಎಸ್-ಭಾರತ ಬಾಂಧವ್ಯಕ್ಕೆ ಮಹತ್ವದ ಕ್ಷಣ-ಮೋದಿ
ಹ್ಯೂಸ್ಟನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಟ್ರಂಪ್ ಗೆ ಧನ್ಯವಾದ; ಯುಎಸ್-ಭಾರತ ಬಾಂಧವ್ಯಕ್ಕೆ ಮಹತ್ವದ ಕ್ಷಣ-ಮೋದಿ

ಹ್ಯೂಸ್ಟನ್: ನಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. 

50,000 ಅನಿವಾಸಿ ಭಾರತೀಯರು ಭಾಗಿಯಾಗಿದ್ದ ಹೌಡಿ-ಮೋದಿ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧದ ಮಹತ್ವದ ಕ್ಷಣ ಎಂದು ಬಣ್ಣಿಸಿದ್ದಾರೆ. 

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್ ನ್ನು ಭಾರತ ಹಾಗೂ ಭಾರತೀಯ ಸಮುದಾಯದ ಆತ್ಮೀಯ ಸ್ನೇಹಿತ ಎಂದು ಹೇಳಿದ್ದು, ಹೌಡಿ ಮೋದಿ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯತೆಗಳನ್ನು ಹಾಗೂ ಅನಿವಾಸಿ ಭಾರತೀಯರ ಸಾಧನೆಗಳನ್ನು ತೆರೆದಿಟ್ಟ ಕಾರ್ಯಕ್ರಮ ಎಂದಿದ್ದಾರೆ. 

ಹ್ಯೂಸ್ಟನ್ ನಲ್ಲಿ ಕಳೆದ ಕ್ಷಣಗಳು ಎಂದಿಗೂ ನನ್ನ ನೆನಪಿನ ಭಾಗವಾಗಿರಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com