ಮಾತನಾಡುವ ಸಮಯ ಮುಗಿದಿದೆ, ಜಗತ್ತೀಗ ಕೆಲಸ ಮಾಡಬೇಕಿದೆ: ಯುಎನ್ ಹವಾಮಾನ ಶೃಂಗದಲ್ಲಿ ಪಿಎಂ ಮೋದಿ

 ಏಕಬಳಕೆ ಪ್ಲ್ಯಾಸ್ಟಿಕ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಒಂದು ಬೃಹತ್ ಆಂದೋಲನಕ್ಕೆ ನಾವು ಈ ಸ್ವಾತಂತ್ರ ದಿನದಂದು ಕರೆ ನೀಡಿದ್ದೇವೆ. ಇದು ಜಾಗತಿಕ ಮಟ್ಟದಲ್ಲಿ ಏಕಬಳಕೆಯ ಪ್ಲ್ಯಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Published: 23rd September 2019 09:40 PM  |   Last Updated: 23rd September 2019 09:40 PM   |  A+A-


ನರೇಂದ್ರ ಮೋದಿ

Posted By : Raghavendra Adiga
Source : Online Desk

ನ್ಯೂಯಾರ್ಕ್: ಏಕಬಳಕೆ ಪ್ಲ್ಯಾಸ್ಟಿಕ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಒಂದು ಬೃಹತ್ ಆಂದೋಲನಕ್ಕೆ ನಾವು ಈ ಸ್ವಾತಂತ್ರ ದಿನದಂದು ಕರೆ ನೀಡಿದ್ದೇವೆ. ಇದು ಜಾಗತಿಕ ಮಟ್ಟದಲ್ಲಿ ಏಕಬಳಕೆಯ ಪ್ಲ್ಯಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಆದರೆ ಹವಾಮಾನ ಬದಲಾವಣೆ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಜಗತ್ತು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.ಇದೀಗ ಕೆಲಸ್ ಮಾಡುವ ಸಮಯ ಬಂದಿದೆ, ಮಾತನಾಡುವ ಸಮಯ ಮುಗಿದಿದೆ ಎಂದು ಅವರು ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ಇಂದು (ಸೋಮವಾರ) ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ನಾವು ಲಕ್ಷಾಂತರ ಕುಟುಂಬಗಳಿಗೆ ಶುದ್ಧ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಿದ್ದೇವೆ. ಜಲ ಸಂಪನ್ಮೂಲ ಅಭಿವೃದ್ಧಿ, ಜಲ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲುಗಾಗಿ ನಾವು 'ಜಲ ಜೀವನ್' ಮಿಷನ್ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರಗಾಮಿ ನಿರೂಪಣೆಗಳಿಗೆ ಕಾರ್ಯತಂತ್ರದ ಪ್ರತಿಕ್ರಿಯೆಗಳ ಕುರಿತು ನಾಯಕರ ಸಂವಾದದಲ್ಲಿ ಭಾಗವಹಿಸಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp