ಪರಮಾಣು ಶಕ್ತಿ ಭಾರತಕ್ಕೆ ಈಗಲೂ ಸವಾಲಾಗಿದೆ: ಪಿಎಂ ಮೋದಿ

ಭಾರತವು ಪರಮಾಣು ಪೂರೈಕೆದಾರರ ಗುಂಪು(ನ್ಯೂಕ್ಲಿಯರ್ ಸಪ್ಲೇಯರ್ಸ್ ಗ್ರೂಪ್-ಎನ್.ಎಸ್.ಜಿ.) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಒಂದೊಮ್ಮೆ ಈ ಸಮಸ್ಯೆ ಬಗೆಹರಿದರೆ ಭಾರತವು ಉಳಿದ ದೇಶಗಳಿಗೆ ಮಾದರಿಯಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published: 25th September 2019 11:41 PM  |   Last Updated: 25th September 2019 11:42 PM   |  A+A-


ಪರಮಾಣು ಶಕ್ತಿ ಭಾರತಕ್ಕೆ ಇನ್ನೂ ಸವಾಲಾಗಿದೆ: ಪಿಎಂ ಮೋದಿ

Posted By : Raghavendra Adiga
Source : PTI

ನ್ಯೂಯಾರ್ಕ್: ಭಾರತವು ಪರಮಾಣು ಪೂರೈಕೆದಾರರ ಗುಂಪು(ನ್ಯೂಕ್ಲಿಯರ್ ಸಪ್ಲೇಯರ್ಸ್ ಗ್ರೂಪ್-ಎನ್.ಎಸ್.ಜಿ.) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಒಂದೊಮ್ಮೆ ಈ ಸಮಸ್ಯೆ ಬಗೆಹರಿದರೆ ಭಾರತವು ಉಳಿದ ದೇಶಗಳಿಗೆ ಮಾದರಿಯಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪರಮಾಣು ಶಕ್ತಿ ಎನ್ನುವುದು ನಾವಿಂದಿಗೂ ಎದುರಿಸುತ್ತಿರುವ ಸವಾಲು ಎಂದು ಮೋದಿ ಹೇಳಿದ್ದಾರೆ.

"ನಾವು ಪರಮಾಣುಪೂರೈಕೆದಾರ ರಾಷ್ಟ್ರಗಳ ಗುಂಪಿನ ಸದಸ್ಯರಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನವನ್ನು ಪಡೆಯುವುದು ನಮಗೆ ಕಠಿಣವಾಗಿದೆ"ನ್ಯೂಯಾರ್ಕ್‌ನ ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮೋದಿ ನುಡಿದರು.

ಅದೇ ವೇಳೆ "ಇದೇನಾದರೂ ಪರಿಹಾರವಾದಲ್ಲಿ  ದೇಶವು ಈ ಕ್ಷೇತ್ರದಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗೆ ಮಾದರಿಯಾಗಲಿದೆ. ಜಾಗತಿಕ ಪರಮಾಣು ವ್ಯಾಪಾರವನ್ನು ನಿಯಂತ್ರಿಸುವ  48 ಸದಸ್ಯರ ಗುಂಪಿಗೆ ಸೇರುವ ಭಾರತದ ಪ್ರಯತ್ನಕ್ಕೆ ಚೀನಾ ಪದೇ ಪದೇ ಅಡ್ಡಿಪಡಿಸಿದೆ.

ಭಾರತವು ಮೇ 2016 ರಲ್ಲಿ ಎನ್‌ಎಸ್‌ಜಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದಾಗಿನಿಂದಲೂ, ಪ್ರಸರಣ ರಹಿತ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕಿದ ದೇಶಗಳಿಗೆ ಮಾತ್ರ ಸಂಸ್ಥೆಗೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಚೀನಾ ಒತ್ತಾಯಿಸುತ್ತಿದೆ. ಭಾರತ ಎನ್‌ಪಿಟಿಗೆ ಸಹಿ ಹಾಕಿಲ್ಲ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp