ಸ್ವಚ್ಛತಾ ಅಭಿಯಾನ ಈಗ ಭಾರತೀಯರ ನಿತ್ಯ ಜೀವನದ ಭಾಗ: ಪಿಎಂ ಮೋದಿ

ಈ ಪ್ರಶಸ್ತಿ ನನಗಲ್ಲ, ನೂರಾರು ಕೋಟಿ ಭಾರತೀಯರಿಗೆ ಸೇರಿದ್ದು, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಕೈಜೋಡಿಸಿದ ಕೋಟಿ ಕೋಟಿ ಭಾರತೀಯರು ಸ್ವಚ್ಛತಾ ಅಭಿಯಾನವನ್ನು ತಮ್ಮ ದಿನನಿತ್ಯ ಜೀವನದ ಭಾಗವಾಗಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published: 25th September 2019 09:08 AM  |   Last Updated: 25th September 2019 11:34 AM   |  A+A-


PM Narendra Modi receives Global Goalkeeper award from Bill Gates

ಬಿಲ್ ಗೇಟ್ಸ್ ಅವರಿಂದ ಗ್ಲೋಬಲ್ ಗೋಲ್ ಕೀಪರ್ ಅವಾರ್ಡ್ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

Posted By : Sumana Upadhyaya
Source : PTI

ಬಿಲ್ ಗೇಟ್ಸ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ನಿಂದ ಪುರಸ್ಕಾರ 

ನ್ಯೂಯಾರ್ಕ್; ಈ ಪ್ರಶಸ್ತಿ ನನಗಲ್ಲ, ನೂರಾರು ಕೋಟಿ ಭಾರತೀಯರಿಗೆ ಸೇರಿದ್ದು, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಕೈಜೋಡಿಸಿದ ಕೋಟಿ ಕೋಟಿ ಭಾರತೀಯರು ಸ್ವಚ್ಛತಾ ಅಭಿಯಾನವನ್ನು ತಮ್ಮ ದಿನನಿತ್ಯ ಜೀವನದ ಭಾಗವಾಗಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಅವರು ವಿಶ್ವಸಂಸ್ಥೆಯಲ್ಲಿ ಇಂದು ಸ್ವಚ್ಛ ಭಾರತ ಅಭಿಯಾನಕ್ಕೆ 'ಗ್ಲೋಬಲ್ ಗೋಲ್ ಕೀಪರ್ ಅವಾರ್ಡ್' ಸ್ವೀಕರಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಪ್ರಶಸ್ತಿಯನ್ನು ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದಕ್ಕೆ ನೀಡಿದೆ. 


ಈ ವರ್ಷ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ. ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಶಸ್ತಿ ಸ್ವೀಕರಿಸಿರುವುದು ಅತ್ಯಂತ ಸ್ಮರಣೀಯ ಎಂದ ಪ್ರಧಾನಿ ಮೋದಿ, ಭಾರತದ 130 ಕೋಟಿ ಜನರು ಪ್ರತಿಜ್ಞೆ ಮಾಡಿ ಆ ನಿಟ್ಟಿನಲ್ಲಿ ಕೆಲಸ ಮಾಡಿದರೆ ಯಾವ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಬಹುದು ಎಂದರು.


ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ದಾಖಲೆಯ 11 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಅಭಿಯಾನ ಯಾರಿಗಾದರೂ ಇಂದು ಪ್ರಯೋಜನವಾಗಿದೆಯೆಂದರೆ ಅದು ಮಹಿಳೆಯರು ಮತ್ತು ಬಡವರಿಗೆ. ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ವರದಿಯಲ್ಲಿ ಭಾರತದ ಹಳ್ಳಿಗಳಲ್ಲಿ ಉತ್ತಮ ಶುಚಿತ್ವ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವುದರಿಂದ ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಕಡಿಮೆಯಾಗಿದೆ ಎಂದು ಹೇಳಿದೆ. ಮಹಿಳೆಯರ ಆರೋಗ್ಯದಲ್ಲಿ ಕೂಡ ಉತ್ತಮವಾಗಿದೆ ಎಂದರು.


ಶುಚಿತ್ವ ವಿಚಾರದಲ್ಲಿ ಭಾರತ ತನ್ನ ಗುರಿಯನ್ನು ಸಾಧಿಸುವ ಸನಿಹದಲ್ಲಿದೆ. ಇದರ ಜೊತೆಗೆ ನಮ್ಮ ಸರ್ಕಾರ ಬೇರೆ ಅಭಿಯಾನವನ್ನು ಇದರ ಜೊತೆಯಲ್ಲಿಯೇ ಕೈಗೊಂಡಿದೆ. ಫಿಟ್ ಇಂಡಿಯಾ ಚಳವಳಿ ಮೂಲಕ ನಾವು ಫಿಟ್ನೆಸ್ ಮತ್ತು ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.


ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2014ರ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನ ಆರಂಭಿಸಲಾಗಿತ್ತು. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp