ಚೋಕ್ಸಿ ಒಬ್ಬ ವಂಚಕ, ಬೇಕಿದ್ದರೆ ಆತನನ್ನು ಕರೆದೊಯ್ಯಿರಿ: ಭಾರತಕ್ಕೆ ಆಂಟಿಗುವಾ ಪ್ರಧಾನಿ

ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್'ಬಿ) ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಚೋಕ್ಸಿ ತಲೆಮರೆಸಿಕೊಂಡಿರುವ ದೇಶದ ಪ್ರಧಾನಿಯೇ ಆತನನ್ನು ವಂಚಕ ಎಂದು ಕರೆದಿದ್ದು, ಆತನಿಂದ ನಮಗೆ ಯಾವುದೇ ರೀತಿಯ ಉಪಯೋಗವಿಲ್ಲ, ಆತನನ್ನು ಕರೆದೊಯ್ಯಿರಿ...
ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಮಂತ್ರಿ ಗಸ್ಟೋನ್ ಬ್ರೌನ್
ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಮಂತ್ರಿ ಗಸ್ಟೋನ್ ಬ್ರೌನ್

ನವದೆಹಲಿ: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್'ಬಿ) ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಚೋಕ್ಸಿ ತಲೆಮರೆಸಿಕೊಂಡಿರುವ ದೇಶದ ಪ್ರಧಾನಿಯೇ ಆತನನ್ನು ವಂಚಕ ಎಂದು ಕರೆದಿದ್ದು, ಆತನಿಂದ ನಮಗೆ ಯಾವುದೇ ರೀತಿಯ ಉಪಯೋಗವಿಲ್ಲ, ಆತನನ್ನು ಕರೆದೊಯ್ಯಿರಿ ಎಂದು ಭಾರತಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ಮೆಹುಲ್ ಚೋಕ್ಸಿಯನ್ನು ವಂಚರ ಎಂದು ಹೇಳಲಾಗುತ್ತಿದೆ. ಆತನಿಂದ ನಮ್ಮ ದೇಶಕ್ಕೆ ಯಾವುದೇ ರೀತಿಯ ಉಪಯೋಗವಿಲ್ಲ. ಚೋಕ್ಸಿಯನ್ನು ಹಸ್ತಾಂತರಿಸಿ ಎಂದು ಭಾರತ ಕೇಳಿದ್ದೇ ಆದರೆ, ಈಗಲೇ ನಮ್ಮ ದೇಶದಿಂದ ಆತನನ್ನು ಹೊರ ಹಾಕುತ್ತೇವೆ. ಚೋಕ್ಸಿಯನ್ನು ಭಾರತಕ್ಕೆ ಒಪ್ಪಿಸಲು ನಾವು ಸಿದ್ಧರಿದ್ದೇವೆಂದು ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಮಂತ್ರಿ ಗಸ್ಟೋನ್ ಬ್ರೌನ್ ಹೇಳಿದ್ದಾರೆ. 

ಇನ್ನೂ ಬೇಕಿದ್ದರೆ, ಭಾರತದ ಅಧಿಕಾರಿಗಳೇ ನಮ್ಮ ದೇಶಕ್ಕೆ ಬಂದು ವಿಚಾರಣೆ ನಡೆಸಲಿ. ಭಾರತದ ಅಧಿಕಾರಿಗಳು ನಮ್ಮ ದೇಶಕ್ಕೆ ಬಂದು ವಿಚಾರಣೆ ನಡೆಸಿದರೂ ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಸಹಕಾರ ನೀಡುತ್ತೇವೆಂದು ತಿಳಿಸಿದ್ದಾರೆ. 

ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಚೋಕ್ಸಿ 2018ರ ಜನವರಿಯಲ್ಲಿ ಭಾರತದಿಂದ ಕಾಲ್ಕಿತ್ತಿದ್ದ. ದೇಶ ದೊರೆತಿದ್ದ ಚೋಕ್ಸಿ ಆಂಟಿಗುವಾ ದೇಶದ ಸದಸ್ಯತ್ವ ಸ್ಥಾನ ಪಡೆದುಕೊಂಡಿದ್ದ. ಅನಾರೋಗ್ಯ ಕಾರಣ ನೀಡಿದ್ದ ಚೋಕ್ಸಿ ಆಂಟಿಗುವಾ ದೇಶದ ಪೌರತ್ವ ಪಡೆದುಕೊಂಡಿದ್ದ. ಬಳಿಕ ಸಿಬಿಐ ಮನವಿ ಮೇರೆಗೆ ಇಂಟರ್ ಪೋಲ್ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com