ಪತ್ರಕರ್ತ ಖಶೋಗ್ಗಿ ಹತ್ಯೆ ನನ್ನ ಕಣ್ಗಾವಲು ಅಡಿಯಲ್ಲೇ ನಡೆದಿದೆ: ಸೌದಿ ರಾಜ

2018ರ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ನಡೆದಿದ್ದು ನನ್ನ ಕಣ್ಗಾವಲ ಅಡಿಯಲ್ಲೇ ಎಂದು ಸೌದಿ ರಾಜ ಮಹಮ್ಮದ್ ಬಿನ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ.
ಮಹಮ್ಮದ್ ಬಿನ್ ಸಲ್ಮಾನ್
ಮಹಮ್ಮದ್ ಬಿನ್ ಸಲ್ಮಾನ್

ವಾಷಿಂಗ್ಟನ್: 2018ರ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ನಡೆದಿದ್ದು ನನ್ನ ಕಣ್ಗಾವಲ ಅಡಿಯಲ್ಲೇ ಎಂದು ಸೌದಿ ರಾಜ ಮಹಮ್ಮದ್ ಬಿನ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ಸೌದಿ ರಾಜ ಅಮೆರಿಕ ಟೆಲಿವಿಷನ್ ಗೆ ನೀಡಿದ ಸಂದರ್ಶನವೊಂದರಲ್ಲಿ ಜಮಾಲ್ ಖಶೋಗ್ಗಿ ಹತ್ಯೆ ಎಲ್ಲವೂ ನನ್ನ ಕಣ್ಗಾವಲಿನ ಅಡಿಯಲ್ಲಿ ನಡೆದಿತ್ತು. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದ್ದರು. 

ಈ ಹೇಳಿಕೆಯ ತುಣುಕುಗಳು ಇದೀಗ ಬಿಡುಗಡೆಯಾಗಿದ್ದು ಅಕ್ಟೋಬರ್ 1ರಂದು ಇದರ ಪೂರ್ಣ ಡಾಕ್ಯುಮೆಂಟರಿ ಪ್ರಸಾರವಾಗಲಿದೆ. ಇನ್ನು ಜಮಾಲ್ ಹತ್ಯೆಗೆ ಮಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದರು ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ಮತ್ತು ವಿದೇಶಿ ಮಾಧ್ಯಮಗಳು ಆರೋಪ ಮಾಡಿದ್ದವು. 

ಈ ಆರೋಪಕ್ಕೆ ಮೌನ ವಹಿಸಿದ್ದ ಸಲ್ಮಾನ್ ಇದೀಗ ಸುಮಾರು ಒಂದು ವರ್ಷದ ನಂತರ ಹತ್ಯೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com